Saturday, August 13, 2022

Latest Posts

ಕಾವೇರಿ-ಹಾರಂಗಿ ನದಿ ನೀರಿನ ಮಟ್ಟ ಏರಿಕೆ: ನಾಟಿ ಗದ್ದೆಗಳು ಜಲಾವೃತ- ರೈತರಿಗೆ ಸಂಕಷ್ಟ

ಕುಶಾಲನಗರ: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ಹಾಗೂ ಹಾರಂಗಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ನೂರಾರು ಎಕರೆ ಭತ್ತದ ಗದ್ದೆಗಳು ಜಲಾವೃತಗೊಂಡಿವೆ.
ಕಾವೇರಿಯ ನೀರಿನ ಮಟ್ಟ ಅಧಿಕವಾಗಿರುವಾಗಲೇ ಹಾರಂಗಿ ಜಲಾಶಯದಿಂದಲೂ ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿರುವುದರಿಂದ ಕೂಡಿಗೆಯಲ್ಲಿ ಎರಡೂ ನದಿಗಳು ಸಂಗಮವಾಗಿ ಮುಂದೆ ಸಾಗಲು ಅಡ್ಡಿಯಾಗುತ್ತಿದ್ದು, ಇದರಿಂದಾಗಿ ಸಂಗಮ ಸ್ಥಳದಿಂದ ಮೇಲ್ಭಾಗದ ಹಾಗೂ ಕೆಳ ಭಾಗದ ಗದ್ದೆಗಳು ನೀರಿನಿಂದ ಆವೃತವಾಗಿವೆ
ಕೂಡಿಗೆ-ಕಣಿವೆ ಮಧ್ಯ ಭಾಗದ ತಗ್ಗು ಪ್ರದೇಶ ದಿವಾಕರ್, ಸಂತೋಷ ,ಕೃಷ್ಣೇಗೌಡ, ಪ್ರಭಾಕರ ಎಂಬವರ ಭತ್ತದ ನಾಟಿ ಗದ್ದೆಗಳಿಗೆ ನದಿಯ ನೀರು ನುಗ್ಗಿದ್ದಲ್ಲದೆ, ಹೆಬ್ಬಾಲೆ ಸಮೀಪದ ಕರಳಹಳ್ಳ ಎಂಬ ಪ್ರದೇಶದಲ್ಲಿ ನಾಟಿ ಮತ್ತು ಸಮೀಪದ ಜೋಳದ ಬೆಳೆ ಜಲಾವೃತಗೊಂಡು ಭಾರೀ ನಷ್ಟ ಸಂಭವಿಸಿದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss