Thursday, August 11, 2022

Latest Posts

ಕಾವೇರುತ್ತಿದೆ ಬಿಹಾರ ಚುನಾವಣೆ: ಮುನ್ನಡೆ ಕಾಯ್ದುಗೊಂಡ ಎನ್ ಡಿ ಎ ಮೈತ್ರಿಕೂಟ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಬಿಹಾರ ವಿಧಾನಸಭಾ ಚುನಾವಣೆಯ ಮತಎಣಿಕೆ ಮುಂದುವರಿದಿದ್ದು, ಎನ್ ಡಿ ಎ ಮೈತ್ರಿಕೂಟ ಹಾಗು ಮಹಾಘಟಬಂಧನ್ ನಡುವೆ ತ್ರೀವ ಪೈಪೋಟಿ ನಡೆಯುತ್ತಿದೆ.
ಸದ್ಯ ರಾತ್ರಿ 8 ಗಂಟೆ ವೇಳೆಗೆ 3.40 ಕೋಟಿ ಮತಗಳ ಎಣಿಕೆಯಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದ್ದು ಎನ್ ಡಿ ಎ ೧೨೨ ಸೀಟ್ ಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಮಹಾಘಟಬಂಧನ್ ೧೧೫ ರಲ್ಲಿ ಮುನ್ನಡೆ ಸಾಧಿಸಿದೆ.
ಇನ್ನು ಆರ್ ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ಅವರು ಹಸನ್ ಪುರ್ ಕ್ಷೇತ್ರದಿಂದ 21,139 ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಈ ಮಧ್ಯೆ ಭಾರತೀಯ ಜನತಾ ಪಕ್ಷ 16, ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) 14 ಹಾಗೂ ಜನತಾದಳ (ಜೆಡಿ(ಯು)) ಏಳು ಮತ್ತು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಐಎನ್ ಸಿ) ಮೂರು ಸ್ಥಾನಗಳನ್ನು ಗೆದ್ದುಕೊಂಡಿವೆ ಎಂದು ಚುನಾವಣಾ ಆಯೋಗದ ವೆಬ್ ಸೈಟ್ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss