Friday, August 19, 2022

Latest Posts

ಕಾಶ್ಮೀರದಲ್ಲಿ ಲಷ್ಕರ್‌ ಇ ತೊಯ್ಬಾ ಉಗ್ರ ಕೃತ್ಯದ ಪ್ಲಾನ್ ವಿಫಲಗೊಳಿಸಿದ ಭದ್ರತಾ ಪಡೆ: ಮೂವರು ಉಗ್ರರ ಅರೆಸ್ಟ್

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ತನ್ನ ನೆಲೆಯನ್ನು ಮತ್ತೆ ಗಟ್ಟಿ ಮಾಡಿಕೊಳ್ಳುವ ಲಷ್ಕರ್‌ ಇ ತೊಯ್ಬಾದ ಕಾರ್ಯತಂತ್ರವನ್ನು ಭದ್ರತಾ ಪಡೆಗಳು ನಾಶಪಡಿಸಿದ್ದು, ಮೂವರು ಭಯೋತ್ಪಾದಕರನ್ನು ಬಂಧಿಸಲಾಗಿದೆ.
ಬಂಧಿತ ಉಗ್ರರು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯ ಐಎಸ್‌ಐನ ಮೊಹಮ್ಮದ್ ಖಾಸೀಂ ಜತೆ ಸಂಪರ್ಕದಲ್ಲಿದ್ದರು ಎಂದು ಜಮ್ಮು-ಕಾಶ್ಮೀರದ ರಿಯಾಸಿ ಎಸ್‌ಎಸ್‌ಪಿ ರಶ್ಮಿ ವಾಜಿರ್ ತಿಳಿಸಿದ್ದಾರೆ.
ಬಂಧಿತ ಮೂವರು ಉಗ್ರರು 18 ವರ್ಷಗಳ ಹಿಂದೆ ಐಎಸ್‌ಐನಿಂದ ಹೊರಹಾಕಲಾಗಿದ್ದ ಹ್ಯಾಂಡ್ಲರ್ ಮೊಹಮ್ಮದ್ ಕಾಸಿಮ್‌ ಜೊತೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಎಫ್‌ಐಆರ್‌ ದಾಖಲಿಸಲಾಗಿದ್ದು, ತನಿಖೆಗಾಗಿ ವಿಶೇಷ ತನಿಖಾ ದಳವನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಇವರನ್ನು ಒಳನುಸುಳುವಿಕೆ ಸಂದರ್ಭ ಉಗ್ರರಿಗೆ ನೆರವಾಗಲು ಐಎಸ್‌ಐ ಬಳಸಿಕೊಳ್ಳುತ್ತಿತ್ತು. ಈ ಪ್ರಕರಣದಲ್ಲಿ ಒಟ್ಟು 11 ಮಂದಿ ಮೇಲೆ ಅನುಮಾನವಿದೆ. ಇದರಲ್ಲಿ ಒಬ್ಬಾಕೆ ಮಹಿಳೆಯೂ ಸೇರಿದ್ದು, ಆಕೆ ಐಎಸ್‌ಐ ಮೊಹಮ್ಮದ್ ಖಾಸೀಂನನ್ನು ಪಾಕಿಸ್ತಾನದಲ್ಲಿ ಭೇಟಿಯಾಗಿದ್ದಳು. ಆತನಿಂದ ಹಣವನ್ನೂ ಪಡೆದಿದ್ದಳು ಎಂದು ವಾಜಿರ್ ಹೇಳಿದ್ದಾರೆ.
ಓರ್ವ ಸರಕಾರಿ ನೌಕರ, ಕಾರ್ಮಿಕ ಮತ್ತು ಅಂಗಡಿ ಮಾಲೀಕನನ್ನು ಬಂಧಿಸಲಾಗಿದೆ. ಬಂಧಿತರ ಕೆಲವು ಖಾತೆಗಳನ್ನು ಪರಿಶೀಲಿಸಿದ್ದು, ಕೆಲವು ಬೇನಾಮಿ ವಹಿವಾಟುಗಳನ್ನು ಪತ್ತೆ ಹಚ್ಚಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿ ಇನ್ನಷ್ಟು ಮಂದಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಎಂದು ರಿಯಾಸಿ ಎಸ್‌ಎಸ್‌ಪಿ ರಶ್ಮಿ ವಾಜೀರ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!