spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಾಶ್ಮೀರದಲ್ಲಿ 4 ಉಗ್ರರ ಎನ್‌ಕೌಂಟರ್‌, ಒಂದೇ ವಾರದಲ್ಲಿ ಆರು ಉಗ್ರರ ಹತ್ಯೆ

- Advertisement -Nitte

ಶ್ರೀನಗರ: ಜಮ್ಮು-ಕಾಶ್ಮೀರದ ಕುಲ್ಗಾಮ್‌ ಹಾಗೂ ಅನಂತನಾಗ್‌ ಜಿಲ್ಲೆಯಲ್ಲಿ ಭಾರತೀಯ ಸೇನೆ ಕೈಗೊಂಡ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ, ನಾಲ್ವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಈ ಪೈಕಿ ಇಬ್ಬರು ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಯ ಭಯೋತ್ಪಾದಕರಿದ್ದಾರೆ ಎಂದು ಸೇನೆ ತಿಳಿಸಿದೆ.
ಕುಲ್ಗಾಮ್‌ನಲ್ಲಿ ಹಿಜ್ಬುಲ್‌ ಉಗ್ರರು ಬೀಡುಬಿಟ್ಟಿರುವ ಕುರಿತು ರಕ್ಷಣಾ ಸಿಬ್ಬಂದಿಗೆ ಮಾಹಿತಿ ದೊರೆತ ಹಿನ್ನೆಲೆ, ಶನಿವಾರ ಮುಂಜಾನೆ ಸೇನೆ ಶೋಧ ಕಾರ್ಯಾಚರಣೆ ನಡೆಸಿ ಇಬ್ಬರ ಎನ್‌ಕೌಂಟರ್‌ ಮಾಡಿದೆ. ಅಲ್ಲದೇ ಈ ಕಾರ್ಯಾಚರಣೆ ವೇಳೆ ಯಾವ ನಾಗರಿಕರಿಗೂ ಹಾನಿ ಉಂಟಾಗಿಲ್ಲ ಎಂದು ಸೇನೆ ಹೇಳಿದೆ.
ಸದ್ಯ ಇಬ್ಬರು ಉಗ್ರರ ಹತ್ಯೆ ಮಾಡಲಾಗಿದ್ದು, ಇವರು ಹಿಜ್ಬುಲ್‌ ಸಂಘಟನೆಗೆ ಸೇರಿದ್ದರು ಎಂಬುದನ್ನು ಬಿಟ್ಟರೆ, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಇನ್ನು ಕಾಶ್ಮೀರದ ಲಲ್ಲನ್‌ ಪ್ರದೇಶದಲ್ಲಿ ನಡೆಸಲಾದ ಮತ್ತೊಂದು ಕಾರ್ಯಾಚರಣೆಯಲ್ಲಿ ಮತ್ತಿಬ್ಬರು ಉಗ್ರರನ್ನು ಸೇನೆ ಹತ್ಯೆ ಮಾಡಿದ್ದು, ಇವರ ಗುರುತು ಇನ್ನು ಪತ್ತೆಯಾಗಿಲ್ಲ ಎಂದು ಹೇಳಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss