ಕಾಸರಗೋಡಿನಲ್ಲಿ‌ ಮತ್ತೆ 12 ಮಂದಿಗೆ ಕೊರೋನಾ: ಪೀಡಿತರ ಸಂಖೈ 120ಕ್ಕೆ ಏರಿಕೆ

0
155
ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರ 12 ಮಂದಿಗೆ ಕರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕು ಪೀಡಿತರ ಸಂಖ್ಯೆ 120 ಕ್ಕೇರಿತು. ರಾಜ್ಯದಲ್ಲಿ 24 ಮಂದಿಗೆ ಕರೊನಾ ವೈರಸ್ ಸೋಂಕು ಬಾಧಿಸಿದ್ದು, ಈ ವರೆಗೆ ಒಟ್ಟು ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಬಾಧಿಸಿದವರ ಸಂಖ್ಯೆ 265 ಕ್ಕೇರಿದೆ. ಇವರಲ್ಲಿ 26 ಮಂದಿ ಗುಣಮುಖರಾಗಿದ್ದಾರೆ. ಗುಣಮುಖರಾದವರಲ್ಲಿ ನಾಲ್ವರು ವಿದೇಶಿಯರು. ಇಬ್ಬರು ಸಾವಿಗೀಡಾಗಿದ್ದಾರೆ. ಇದೀಗ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಾಗಿ ಕರೊನಾ ವೈರಸ್ ಬಾಧಿತ 237 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಬುಧವಾರ ಕಾಸರಗೋಡು ಜಿಲ್ಲೆಯಲ್ಲಿ 12, ಎರ್ನಾಕುಳಂ-3, ತೃಶ್ಶೂರು-2, ಮಲಪ್ಪುರಂ-2, ಕಣ್ಣೂರು-2 ಮತ್ತು ಪಾಲ್ಘಾಟ್ ಜಿಲ್ಲೆಯಲ್ಲಿ-1 ಎಂಬಂತೆ ರೋಗ ಬಾಧಿಸಿದ್ದು, ದೃಢಗೊಂಡಿದೆ.
ರಾಜ್ಯದಲ್ಲಿ ಒಟ್ಟು 164130 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 622 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದು, 163508 ಮಂದಿ  ಮನೆಗಳಲ್ಲಿ ನಿಗಾದಲ್ಲಿದ್ದಾರೆ. ಬುಧವಾರ 123 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ತಿರುವನಂತಪುರ ಮತ್ತು ಕಲ್ಲಿಕೋಟೆಯ ತಲಾ ಒಬ್ಬರು ಕರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಬುಧವಾರ ದೃಢೀಕರಿಸಿದ ರೋಗ ಬಾಧಿತರಲ್ಲಿ 9 ಮಂದಿ ವಿದೇಶದಿಂದ ಬಂದವರು. ಉಳಿದವರು ರೋಗ ಬಾಧಿತರೊಂದಿಗಿನ ಸಂಪರ್ಕದಿಂದ ರೋಗ ಬಾಧಿಸಿದೆ.
ರಾಜ್ಯದಲ್ಲಿ ಒಟ್ಟು 191 ಮಂದಿ ವಿದೇಶದಿಂದ ಬಂದವರಿಗೆ ರೋಗ ದೃಢೀಕರಿಸಲಾಗಿದ್ದು, 7 ಮಂದಿ ವಿದೇಶಿಯರಿಗೆ ರೋಗ ದೃಢಗೊಂಡಿದೆ. 67 ಮಂದಿ ಕರೊನಾ ವೈರಸ್ ಸೋಂಕಿತರೊಂದಿಗಿನ ಸಂಪರ್ಕದಿಂದ ರೋಗ ಬಾಧಿಸಿದೆ.

LEAVE A REPLY

Please enter your comment!
Please enter your name here