Wednesday, August 17, 2022

Latest Posts

ಕಾಸರಗೋಡಿನಲ್ಲಿ ಮತ್ತೆ ಒಬ್ಬರಿಗೆ ಕೊರೋನಾ ಸೋಂಕು, ಕೇರಳದಲ್ಲಿ ಒಟ್ಟು 16 ಮಂದಿ ಬಾಧಿತರು

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ಒಬ್ಬರಲ್ಲಿ ಕೊರೋನಾ ಸೋಂಕು ಖಚಿತಗೊಂಡಿದೆ. ಇದೇ ವೇಳೆ ಶುಕ್ರವಾರ ರಾಜ್ಯದಲ್ಲಿ ಒಟ್ಟು 16 ಮಂದಿಗೆ ಕೋವಿಡ್ – 19 ಬಾಧಿಸಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾಸರಗೋಡು 1, ವಯನಾಡು 5, ಕಲ್ಲಿಕೋಟೆ 2, ಮಲಪ್ಪುರಂ 4, ಪಾಲಕ್ಕಾಡು 1, ಕೊಲ್ಲಂ 1, ಆಲಪ್ಪುಳ 2 ಈ ರೀತಿಯಾಗಿ ಸೋಂಕು ಬಾಧಿಸಿದೆ ಎಂದು ಅವರು ವಿವರಿಸಿದರು. ಕೇರಳದಲ್ಲಿ ಮತ್ತೆ ಕೊರೋನಾ ರಣಕೇಕೆ ಹಾಕುತ್ತಿದ್ದು ಈ ಸಾಂಕ್ರಾಮಿಕ ರೋಗದಿಂದ ಮುಕ್ತಿ ಯಾವಾಗ ಎಂಬ ಪ್ರಶ್ನೆ ಉದ್ಭವವಾಗಿದೆ. ಈ ಮದ್ಯೆ ಕೊರೋನಾ ಮುಕ್ತವಾಗಿದ್ದ ಕಾಸರಗೋಡು ಜಿಲ್ಲೆಯಲ್ಲಿ ಇದೀಗ ಒಟ್ಟು 15 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮೂಲಕ ಜಿಲ್ಲೆಯ ಜನರಿಗೆ ಮತ್ತೆ ನೆಮ್ಮದಿ ಇಲ್ಲದಂತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!