Tuesday, July 5, 2022

Latest Posts

ಕಾಸರಗೋಡಿನಲ್ಲಿ ಹಾಡಹಗಲೇ ವ್ಯಕ್ತಿಯ ಬರ್ಬರವಾಗಿ ಥಳಿಸಿ ಕೊಂದ ಗುಂಪು

ಹೊಸ ದಿಗಂತ ವರದಿ, ಕಾಸರ‌ಗೋಡು:

ಕಾಸರ‌ಗೋಡಿನ ಚೆಮ್ನಾಡು ಮೂಲದ ವ್ಯಕ್ತಿಯೊಬ್ಬನನ್ನು ಕರಂದಕ್ಕಾಡು ಸಮೀಪದ ಅಶ್ವಿನಿ ನಗರದಲ್ಲಿ ಜನರ ಗುಂಪೊಂದು ಥಳಿಸಿ ಕೊಲೆಗ್ಯೆದ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಮೂಲತಃ ಚೆಮ್ನಾಡು ನಿವಾಸಿ, ಇದೀಗ ದೇಳಿಯಲ್ಲಿ ವಾಸಿಸುತ್ತಿದ್ದ ಮೊಹಮ್ಮದ್ ರಫೀಕ್ (48) ಎಂದು ಗುರುತಿಸಲಾಗಿದೆ. ಘಟನೆಯು ಶನಿವಾರ ಅಪರಾಹ್ನ ಕರಂದಕ್ಕಾಡು ಅಶ್ವಿನಿ ನಗರದ ಕಿಮ್ಸ್ ಹಾಗೂ ಅರಮನ ಖಾಸಗಿ ಆಸ್ಪತ್ರೆಗಳ ಬಳಿ ನಡೆದಿದೆ. ರಫೀಕ್‌ನನ್ನು ಕಾಸರ‌ಗೋಡು ಜನರಲ್ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಸಾವು ಸಂಭವಿಸಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿದು ಕಾಸರ‌ಗೋಡು ಡಿವೈಎಸ್‌ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸರ ತಂಡವು ಸ್ಥಳಕ್ಕೆ ತಲುಪಿದೆ. ಸಮೀಪದ ಸಂಸ್ಥೆಗಳು, ಅಂಗಡಿಗಳು ಮತ್ತು ಇತರ ಕಟ್ಟಡಗಳ ಸಿಸಿ ಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದರು.
ರಫೀಕ್ ತನಗೆ ಕಿರುಕುಳ ನೀಡುತ್ತಿದ್ದಾನೆಂದು ಆರೋಪಿಸಿ ಬಾಲಕಿಯೊಬ್ಬಳು ಅಶ್ವಿನಿ ನಗರದಲ್ಲಿ ಕೆಲವು ಜನರಿಗೆ ದೂರು ನೀಡಿದ್ದಳು. ಇದೇ ಸಂದರ್ಭದಲ್ಲಿ ರಫೀಕ್ ನನ್ನು ಜನರ ಒಂದು ಗುಂಪು ಸುತ್ತುವರಿದು ಭೀಕರವಾಗಿ ಥಳಿಸಿತು ಎಂದು ಪರಿಸರದ ನಿವಾಸಿಗಳು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss