Thursday, August 11, 2022

Latest Posts

ಕಾಸರಗೋಡಿನಿಂದ ಕರ್ನಾಟಕಕ್ಕೆ ಹೋಗಿ ಬರುವವರಿಗೆ ವ್ಯವಸ್ಥೆ ಮಾಡದಿದ್ದಲ್ಲಿ ತೀವ್ರ ಹೋರಾಟ: ಶ್ರೀಕಾಂತ್ ಎಚ್ಚರಿಕೆ

ಕಾಸರಗೋಡು: ಕಾಸರಗೋಡು ಜಿಲ್ಲೆಯಿಂದ ದಿನನಿತ್ಯ ಉದ್ಯೋಗಕ್ಕೆ ಹಾಗೂ ವ್ಯಾಪಾರಕ್ಕಾಗಿ ಕರ್ನಾಟಕಕ್ಕೆ ಹೋಗಿ ಬರುವವರಿಗೆ ಹೇರಿದ ನಿಯಂತ್ರಣವನ್ನು ಹಿಂತೆಗೆಯದಿದ್ದಲ್ಲಿ ಬಿಜೆಪಿ ಪ್ರಬಲ ಪ್ರತಿಭಟನೆಯನ್ನು ಆರಂಭಿಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ , ನ್ಯಾಯವಾದಿ ಕೆ.ಶ್ರೀಕಾಂತ್ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಹಾಗೂ ಕೇರಳ ಸರಕಾರಗಳು ಹೊರಡಿಸಿದ ಅನ್ ಲಾಕ್ 2 ಹಾಗೂ 3ರ ಆದೇಶ ಪ್ರಕಾರ ಅಂತರ್ ರಾಜ್ಯ ಪ್ರಯಾಣಕ್ಕೆ ಯಾವುದೇ ನಿಯಂತ್ರಣ ಹೇರಬಾರದು. ಆದರೆ ಅದಕ್ಕೆ ವಿರುದ್ಧವಾಗಿ ಪ್ರಯಾಣ ನಿಯಂತ್ರಣ ಮುಂದುವರಿದರೆ ಅದನ್ನು ಯಾವುದೇ ಕಾರಣಕ್ಕೂ ಅಂಗೀಕರಿಸಲು ಸಾಧ್ಯವಿಲ್ಲ ಎಂದು ಕೆ.ಶ್ರೀಕಾಂತ್ ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಸಾವಿರಾರು ಜನರು ನೆರೆ ರಾಜ್ಯ ಕರ್ನಾಟಕವನ್ನು ಆಶ್ರಯಿಸಿ  ಜೀವಿಸುತ್ತಿದ್ದಾರೆ. ಕ್ವಾರಂಟೈನ್ ನಿಬಂಧನೆ ಕಡ್ಡಾಯ ಮಾಡುವುದರಿಂದ ಉದ್ಯೋಗಕ್ಕೆ ಹೋಗಲು ಸಾಧ್ಯವಾಗದ ಪರಿಸ್ಥಿತಿಯಿದೆ. ಇದರಿಂದಾಗಿ ಜಿಲ್ಲೆಯ ಅನೇಕ ಜನರು ತಮ್ಮ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸಲಿದ್ದಾರೆ ಎಂದು ಅವರು ನುಡಿದರು. ಕರ್ನಾಟಕಕ್ಕೆ ಪ್ರಯಾಣ ನಿಯಂತ್ರಣ ಹೇರಿದರೂ, ಕಾಸರಗೋಡಿನಲ್ಲಿ
ಕೋವಿಡ್ ವೈರಸ್ ನಿಯಂತ್ರಿಸಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ ಎಂಬುದು ಗಮನಾರ್ಹ ಸಂಗತಿ ಎಂದವರು ತಿಳಿಸಿದರು. ಕರ್ನಾಟಕಕ್ಕೆ ಹೋಗಿ ಬರುವುದರಿಂದ ಕೊರೋನಾ ರೋಗ ವರ್ಧನೆಯಾಗುತ್ತದೆ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈಗಿರುವ ಅಂತಾರಾಜ್ಯ ಪ್ರಯಾಣ ನಿಯಂತ್ರಣವನ್ನು ಹಿಂತೆಗೆಯದಿದ್ದರೆ ಬೃಹತ್ ಪ್ರತಿಭಟನೆ ಹಾಗೂ ಕಾನೂನು ಹೋರಾಟಕ್ಕೆ ಬಿಜೆಪಿ ಮುಂದಾಗಲಿದೆ ಎಂದು ಕೆ.ಶ್ರೀಕಾಂತ್ ಎಚ್ಚರಿಸಿದರು.
ಅಂತಾರಾಜ್ಯ ಪ್ರಯಾಣ ನಿಷೇಧದ ಬಗ್ಗೆ ಜಿಲ್ಲೆಯ ಸಂಸದರು ಹಾಗೂ ಎಲ್ಲ ಶಾಸಕರುಗಳ ಮೌನ ನಿಜಕ್ಕೂ ಖಂಡನೀಯವಾಗಿದೆ ಎಂದು ಬಿಜೆಪಿ ಜಿಲ್ಲಾ ಸಮಿತಿ ತಿಳಿಸಿದೆ. ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಈ ವಿಷಯದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷರು ಆಗ್ರಹಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss