Wednesday, August 17, 2022

Latest Posts

ಕಾಸರಗೋಡು: ಅಯೋಧ್ಯೆ ಕರಸೇವಕರಿಗೆ ಯುವಮೋರ್ಚಾದಿಂದ ಅಭಿನಂದನೆ

ಕಾಸರಗೋಡು: ಭಾರತೀಯ ಜನತಾ ಯುವಮೋರ್ಚಾದ ಮಾನ್ಯ ಘಟಕ (ಬದಿಯಡ್ಕ ಪಂಚಾಯತ್ ನ 17ನೇ ವಾರ್ಡ್)ದ ವತಿಯಿಂದ ಅಯೋಧ್ಯೆಗೆ ಕರಸೇವೆಗೆ ತೆರಳಿದ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ ಜರಗಿತು.

ಸಮಾರಂಭದ ಅಧ್ಯಕ್ಷತೆಯನ್ನು ಭಾರತೀಯ ಜನತಾ ಪಕ್ಷದ ಬದಿಯಡ್ಕ ಪಂಚಾಯತ್ ಸಮಿತಿಯ ಅಧ್ಯಕ್ಷ ಡಿ.ಶಂಕರ ವಹಿಸಿದ್ದರು. ಬಿಜೆಪಿ ಕಾಸರಗೋಡು ಮಂಡಲ ಸಮಿತಿ ಅಧ್ಯಕ್ಷ ಹರೀಶ್ ನಾರಂಪಾಡಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಬದಿಯಡ್ಕ ಗ್ರಾಮ ಪಂಚಾಯತ್ ಸದಸ್ಯೆ ಪ್ರೇಮಕುಮಾರಿ, ಮಾಜಿ ಸದಸ್ಯ ಮಂಜುನಾಥ ಡಿ. ಮಾನ್ಯ , ಮಹಿಳಾಮೋರ್ಚಾ ಮಂಡಲ ಅಧ್ಯಕ್ಷೆ ರಜನಿ ಸಂದೀಪ್, ಹಿರಿಯ ಸ್ವಯಂಸೇವಕ ವಿನಯ ಕುಮಾರ್ ಎಂ.ಎಸ್., ಯುವಮೋರ್ಚಾ ಬದಿಯಡ್ಕ ಪಂಚಾಯತ್ ಸಮಿತಿ ಕಾರ್ಯದರ್ಶಿ ಸುಜಿತ್ ಬೇಳ ಭಾಗವಹಿಸಿದ್ದರು.

ಅಯೋಧ್ಯೆಗೆ ಕರಸೇವೆಗಾಗಿ  ತೆರಳಿದ ಕಾರ್ಯಕರ್ತರಾದ ತಿರುಮಲೇಶ್ವರ ಮಾನ್ಯ , ಶಶಿಧರ ಆಚಾರಿ, ಬಾಲಚಂದ್ರ ಮಣಿಯಾಣಿ ಏಣಿಯರ್ಪು, ಮಂಜುನಾಥ ಡಿ.ಮಾನ್ಯ , ದಿನೇಶ್ ಮಾನ್ಯ , ಗಿರೀಶ್ ಮಾನ್ಯ ಅವರಿಗೆ ಶಾಲು ಹೊದಿಸಿ ಗೌರವ ಅಭಿನಂದನೆ ಸಲ್ಲಿಸಲಾಯಿತು. ಯಜ್ಞೇಶ್ ಸ್ವಾಗತಿಸಿ, ವಿವೇಕ್ ಮಾನ್ಯ ವಂದಿಸಿದರು. ಚಂದ್ರೇಶ್ ಮಾನ್ಯ ಕಾರ್ಯಕ್ರಮ ನಿರೂಪಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!