Wednesday, August 10, 2022

Latest Posts

ಕಾಸರಗೋಡು| ಆ.25 ರಿಂದ ಬಿಜೆಪಿಯಿಂದ ಅಂತಾರಾಜ್ಯ ಪಾಸ್ ಉಲ್ಲಂಘನಾ ಆಂದೋಲನ ಆರಂಭ

ಕಾಸರಗೋಡು: ಅಂತಾರಾಜ್ಯ ಪ್ರಯಾಣಕ್ಕೆ ಯಾವುದೇ ಅನುಮತಿ ಅಗತ್ಯವಿಲ್ಲ ಎಂಬ  ಕೇಂದ್ರ ಸರಕಾರದ ಸ್ಪಷ್ಟ ನಿರ್ದೇಶನವಿದ್ದರೂ ಕೇರಳ ಸರಕಾರವು ಮಾತ್ರ ಅದಕ್ಕೆ ತದ್ವಿರುದ್ಧವಾಗಿ ಕರ್ನಾಟಕಕ್ಕೆ ಹೋಗಲು ಪಾಸ್ ಮೂಲಕ ನಿಯಂತ್ರಣ ಹೇರಿದ ಕ್ರಮವನ್ನು ಪ್ರಬಲವಾಗಿ ಖಂಡಿಸಿ ಬಿಜೆಪಿ ನೇತೃತ್ವದಲ್ಲಿ ಆಗಸ್ಟ್ 25ರಂದು  ಬೆಳಗ್ಗೆ 10ಗಂಟೆಗೆ ಪಾಸ್ ಉಲ್ಲಂಘನಾ ಆಂದೋಲನವನ್ನು ಆರಂಭಿಸಲಾಗುವುದು.
ಕೇರಳದಿಂದ ಕರ್ನಾಟಕಕ್ಕೆ ಅನಗತ್ಯವಾಗಿ ಪಾಸ್ ಮತ್ತು ನಿಯಂತ್ರಣ ಹೇರುವುದರಿಂದ ಸಾವಿರಾರು ಮಂದಿ ತಮ್ಮ ಉದ್ಯೋಗ ಹಾಗೂ ವ್ಯಾಪಾರ ನಡೆಸಲಾಗದೆ ದಿನಂಪ್ರತಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೂ ಕರ್ನಾಟಕಕ್ಕೆ ಮುಕ್ತ ಪ್ರವೇಶ ನಿಷೇಧಿಸಲಾಗಿದೆ. ಆದ್ದರಿಂದ ಕೇರಳ ರಾಜ್ಯ ಸರಕಾರದ ಇಂತಹ ಜನವಿರೋಧಿ ನಿಲುವಿನ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲು ಬಿಜೆಪಿ ನಿರ್ಧರಿಸಿದೆ.
ಈ ನಿಟ್ಟಿನಲ್ಲಿ ಕಾಸರಗೋಡಿನಲ್ಲಿ ಸೋಮವಾರ ಜರಗಿದ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮೇಲ್ಪಟ್ಟು ನೇತಾರರ ತುರ್ತು ಸಭೆಯು ಈ ಬಗ್ಗೆ ನಿರ್ಣಯ ಕೈಗೊಂಡಿದೆ.
ಅದರಂತೆ ಆ.25ರಂದು ಮಂಗಳವಾರ ಬೆಳಗ್ಗೆ 10 ಗಂಟೆಗೆ ತಲಪ್ಪಾಡಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ , ನ್ಯಾಯವಾದಿ ಕೆ.ಶ್ರೀಕಾಂತ್ ಅವರು ಪ್ರತಿಭಟನಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಭಾಗವಹಿಸುವರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss