Wednesday, July 6, 2022

Latest Posts

ಕಾಸರಗೋಡು| ಊರಿಗೆ ಮರಳುವವರಿಗೆ ತಲಪ್ಪಾಡಿ ಗಡಿಯಲ್ಲಿ ಕಿರುಕುಳ: ಮೇ 11ರಿಂದ ಬಿಜೆಪಿ ಹೋರಾಟ

ಕಾಸರಗೋಡು: ಕೋವಿಡ್ 19 ಲಾಕ್‌ ಡೌನ್ ಹಿನ್ನೆಲೆಯಲ್ಲಿ ಇತರ ರಾಜ್ಯಗಳಿಂದ ಮನೆಗೆ ಮರಳುತ್ತಿರುವ ಕೇರಳಿಗರಿಗೆ ಕಿರುಕುಳ ನೀಡುತ್ತಿರುವ ರಾಜ್ಯ ಸರಕಾರದ ಧೋರಣೆಗೆ ಎದುರಾಗಿ ಬಿಜೆಪಿಯಿಂದ ಮೇ 11ರಿಂದ ಪ್ರತಿಭಟನೆ ಪ್ರಾರಂಭವಾಗಲಿದೆ.
ಕೇರಳೀಯರು ಅನೇಕ ತೊಂದರೆಗಳನ್ನು ಎದುರಿಸುತ್ತಾ ಕೇರಳ ಗಡಿಯನ್ನು ತಲುಪುತ್ತಿದ್ದಾರೆ. ತಲಪಾಡಿ ಗಡಿಯ ಕಾರ್ಯಾಲಯದಲ್ಲಿ ಅನಾವಶ್ಯಕವಾದ ನಿಬಂಧನೆಗಳನ್ನು ಹೇರಿ ಅಧಿಕಾರಿಗಳು, ಮಕ್ಕಳು ಸೇರಿದಂತೆ ಮಹಿಳೆಯರ ಮೇಲೆ ಕ್ರೂರ ದಬ್ಬಾಳಿಕೆ ನಡೆಸುತ್ತಿದ್ದಾರೆ.
ಗಡಿಯಲ್ಲಿ ಹೊರ ರಾಜ್ಯಗಳಿಂದ ಬರುವವರಿಗೆ ಆಹಾರ ಅಥವಾ ಕುಡಿಯುವ ನೀರು ಕೂಡ ನೀಡದೆ ಅಮಾನವೀಯ ಮನೋಭಾವವನ್ನು ಪಿಣರಾಯಿ ವಿಜಯನ್ ಸರಕಾರ ಅನುಸರಿಸುತ್ತಿದೆ ಮತ್ತು ಸತಾಯಿಸಲಾಗುತ್ತಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯದ ವಿವಿಧ ಭಾಗಗಳಿಗೆ ಪ್ರಯಾಣಿಸಬೇಕಾದವರು ವಾಹನಗಳ ಸೌಕರ್ಯವಿಲ್ಲದೆ ಪರದಾಡುವಂತಾಗಿದೆ.
ಸ್ವಂತವಾಗಿ ವಾಹನಗಳಿರುವವರು ಮಾತ್ರ ಬರಬೇಕು ಎಂಬ ಸೊಕ್ಕಿನ ಮನೋಭಾವವನ್ನು ಅನುಸರಿಸಲಾಗುತ್ತಿದೆ.
ಗಡಿ ಪ್ರದೇಶದ ಕಾರ್ಯಾಲಯಗಳಲ್ಲಿ
ವಿಳಂಬ ಮಾಡದೆ ಜನರಿಗೆ ಮಂದೆ ಸಾಗಲು ಅನುವು ಮಾಡಿಕೊಡಬೇಕು. ಆಹಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಒದಗಿಸಿ ಕೊಡಬೇಕು ಎಂದು ಬಿಜೆಪಿ ತಿಳಿಸಿದೆ.
ಈ ಮಧ್ಯೆ ಕನಿಷ್ಟ ಪಕ್ಷ ಗಡಿ ಪ್ರದೇಶಕ್ಕೆ ತಲುಪುವವರನ್ನು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ತಮ್ಮ ಸ್ವಂತ ಊರಿಗೆ ಕಳುಹಿಸಲು ಅಗತ್ಯದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಬೇಡಿಕೆ ಇಟ್ಟುಕೊಂಡು ಮೇ 11ರಂದು ಬೆಳಗ್ಗೆ 10.30ಕ್ಕೆ ಕಾಸರಗೋಡು ಕೆಎಸ್ಆರ್ ಟಿ ಸಿ ಡಿಪ್ಪೋ ದ ಮುಂದೆ ಮತ್ತು ತಲಪಾಡಿ ಗಡಿಯ ಕಾರ್ಯಾಲಯದ ಮುಂದೆ ಬಿಜೆಪಿ ಪ್ರತಿಭಟನೆಗೆ ಚಾಲನೆ ನೀಡಲಿದೆ. ಕಾಸರಗೋಡು ಕೆಎಸ್ ಆರ್ ಟಿಸಿ ಬಸ್ ಸ್ಟ್ಯಾಂಡ್ ನ ಮುಂದೆ ಬಿಜೆಪಿ ಜಿಲ್ಲಾ ಅಧ್ಯಕ್ಷ , ನ್ಯಾಯವಾದಿ ಕೆ.ಶ್ರೀಕಾಂತ್ ಪ್ರತಿಭಟನೆಯನ್ನು ಉದ್ಘಾಟಿಸುವರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss