Wednesday, August 17, 2022

Latest Posts

ಕಾಸರಗೋಡು| ಎಡನೀರು ಮಠಕ್ಕೆ ಬಿಜೆಪಿ ಕೇರಳ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಭೇಟಿ

ಕಾಸರಗೋಡು: ಬಿಜೆಪಿ ಕೇರಳ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಅವರು ಮಂಗಳವಾರ ಮಧ್ಯಾಹ್ನ ಎಡನೀರು ಮಠಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಠದ ಪ್ರಮುಖರು ಬಿಜೆಪಿ ರಾಜ್ಯ ಅಧ್ಯಕ್ಷರನ್ನು ಸ್ವಾಗತಿಸಿ ಬರಮಾಡಿಕೊಂಡರು. ಎಡನೀರು ಮಠಾಧೀಶರಾಗಿದ್ದ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಇತ್ತೀಚೆಗೆ ವಿಷ್ಣುಪಾದ ಸೇರಿದ್ದು , ಈ ನಿಮಿತ್ತ ಕೆ.ಸುರೇಂದ್ರನ್ ಮಠಕ್ಕೆ ಸಂದರ್ಶನ ನೀಡಿ ಪುಷ್ಪನಮನ ಸಲ್ಲಿಸಿದರು.
ಅಲ್ಲದೆ ಶ್ರೀ ಮಠದ ಪ್ರಮುಖರೊಂದಿಗೆ ಮಾತುಕತೆ ನಡೆಸಿ ಎಡನೀರು ಮಠದ ಮುಂದಿನ ಪೀಠಾಧಿಪತಿಗಳ ಬಗ್ಗೆಯೂ ವಿಚಾರ ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿಯಾದ ಜಿಲ್ಲಾ ಪ್ರಭಾರಿ ರಘುನಾಥ್, ಕಾಸರಗೋಡು ಜಿಲ್ಲಾಧ್ಯಕ್ಷ , ನ್ಯಾಯವಾದಿ ಕೆ.ಶ್ರೀಕಾಂತ್, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಮುಖಂಡರಾದ ಪ್ರಮೀಳಾ ಸಿ.ನಾಯ್ಕ್ , ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ , ಎಂ.ಸುಧಾಮ ಗೋಸಾಡ, ನ್ಯಾಯವಾದಿ ಎ.ಸದಾನಂದ ರೈ , ಕೋಳಾರು ಸತೀಶ್ಚಂದ್ರ ಭಂಡಾರಿ, ಎ. ವೇಲಾಯುಧನ್, ಸತೀಶ್ ಎನ್., ಧನಂಜಯ ಮಧೂರು, ಹರೀಶ್ ನಾರಂಪಾಡಿ, ಮೋಹನ ಶೆಟ್ಟಿ , ಜಯಚಂದ್ರ ಎ.ಎಂ., ರಮೇಶ್ ಮಾವಿನಕಟ್ಟೆ ಮುಂತಾದವರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!