Saturday, July 2, 2022

Latest Posts

ಕಾಸರಗೋಡು ಎಲೆಕ್ಷನ್: ವಿವಿಧೆಡೆ ಪುತ್ತೂರು ಶಾಸಕ ಸಂಜೀವ ಮಠಂದೂರುರಿಂದ ಮತಯಾಚನೆ

ಹೊಸ ದಿಗಂತ ವರದಿ, ಕಾಸರಗೋಡು:

ಕೇರಳ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ಅಂಗವಾಗಿ ಕಾಸರಗೋಡು ಜಿಲ್ಲಾ ಪಂಚಾಯತ್ ನ ದೇಲಂಪಾಡಿ ಡಿವಿಜನ್ ನ ವಿವಿಧೆಡೆಗೆ ತೆರಳಿ ಪುತ್ತೂರು ಶಾಸಕ ಸಂಜೀವ ಮಠಂದೂರು ಸೋಮವಾರ ಮತಯಾಚಿಸಿದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಧನೆಗಳು, ಬಿಜೆಪಿಯ ಕ್ರಮಬದ್ಧದ ತತ್ವ ಸಿದ್ಧಾಂತ ಅಲ್ಲದೆ ಪಕ್ಷದ ಜನಪರ ಹಾಗೂ ಅಭಿವೃದ್ಧಿ ಪರ ಯೋಜನೆಗಳ ಬಗ್ಗೆ ಪುತ್ತೂರು ಶಾಸಕರು ಮತದಾರರಿಗೆ ವಿವರಿಸುತ್ತಾ ಸಾಗಿದರು. ಜೊತೆಗೆ ಕಾಸರಗೋಡು ಜಿಲ್ಲೆಯಲ್ಲಿ ಹೆಚ್ಚಿನ ವಾರ್ಡ್ ಗಳಲ್ಲೂ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ನೇತಾರರು ಹಾಗೂ ಕಾರ್ಯಕರ್ತರು ಶಕ್ತಿಮೀರಿ ಶ್ರಮಿಸಬೇಕೆಂದು ಕರೆ ನೀಡಿದರು.
ಬಿಜೆಪಿ ನೇತಾರ ಹರಿಪ್ರಸಾದ್ ಅಡ್ಯನಡ್ಕ , ಕಾಸರಗೋಡು ಜಿಲ್ಲಾ ಪಂಚಾಯತ್ ನ ದೇಲಂಪಾಡಿ ಡಿವಿಜನ್ ಬಿಜೆಪಿ (ಎನ್ ಡಿಎ) ಅಭ್ಯರ್ಥಿ ಎಂ.ಸುಧಾಮ ಗೋಸಾಡ, ದೇಲಂಪಾಡಿ ಗ್ರಾಮ ಪಂಚಾಯತ್ ನ ಬಳ್ಳಕ್ಕಾನ ವಾರ್ಡ್ ಬಿಜೆಪಿ ಅಭ್ಯರ್ಥಿ ಪ್ರಮೀಳಾ ಸಿ.ನಾಯ್ಕ್ ಅಲ್ಲದೆ ಇತರ ಅಭ್ಯರ್ಥಿಗಳು, ಪ್ರಮುಖರು, ಕಾರ್ಯಕರ್ತರು ಜೊತೆಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss