ಮಂಗಳೂರು: ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳ ಹಿನ್ನೆಲೆಯಲ್ಲಿ ಕರ್ನಾಟಕ-ಕಾಸರಗೋಡು ನಡುವೆ ಸಂಚರಿಸುವವರಿಗೆ ನೀಡಲಾಗುತ್ತಿದ್ದ ಇ ಪಾಸ್ ರದ್ದುಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಆದರೆ ಈಗಾಗಲೇ ನೀಡಲಾಗಿರುವ ಪಾಸ್ ಜು.4ರ ತನಕ ಮಾನ್ಯವಾಗಿರುತ್ತದೆ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.
ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ವ್ಯಕ್ತಿಗಳ ಅಂತರರಾಜ್ಯ ಸಂಚಾರಕ್ಕೆ ಚಾಲ್ತಿಯಲ್ಲಿರುವ ನಿರ್ಬಂಧಗಳ ಕಾರಣದಿಂದಾಗಿ, ಕೇರಳದ ಕಾಸರ್ಗೋಡು, ಕೇರಳದ ನಿವಾಸಿಗಳಿಗೆ ಅನುಕೂಲವಾಗುವಂತೆ ಇ ಪಾಸ್ಗಳನ್ನು ನೀಡಲಾಗಿತ್ತು.
ಈಗಾಗಲೇ ನೀಡಲಾಗಿರುವ ಪಾಸ್ ಗಳು 30 ಜೂನ್ ವರೆಗೆ ಮಾನ್ಯವಾಗಿತ್ತು, ಆದರೆ ಅಂತಹ ಎಲ್ಲಾ ಪಾಸುದಾರರಿಗೆ ಅನುಕೂಲವಾಗುವಂತೆ ಎಲ್ಲಾ ಪಾಸ್ಗಳು ಜುಲೈ 4 ರವರೆಗೆ ಮಾನ್ಯವಾಗಿರುತ್ತವೆ ಎಂದು ಮೂಲಗಳು ತಿಳಿಸಿವೆ.
ಯಾವ ಪಾಸುದಾರರಿಗೂ ಹೊಸ ಪಾಸ್ ನೀಡಲಾಗುವುದಿಲ್ಲ. ಅಂತಾರಾಜ್ಯ ಪ್ರಯಾಣ ಮಾಡುವವರು ಆನ್ ಲೈನ್ ನಲ್ಲಿ ಎಂಟ್ರಿ ಮಾಡಬೇಕಿದ್ದು, ಬಳಿಕ ಮೊಬೈಲ್ ಗೆ ಬಂದ ಸಂದೇಶವನ್ನು ಗಡಿಯಲ್ಲಿನ ಪೊಲೀಸರಿಗೆ ತೋರಿಸಬೇಕಾಗುತ್ತದೆ ಎಂದು ಹೇಳಲಾಗಿದೆಯಾದರೂ ಅಧಿಕೃತ ಆದೇಶ ಇನ್ನಷ್ಟೇ ಬರಬೇಕಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.