Wednesday, July 6, 2022

Latest Posts

ಕಾಸರಗೋಡು| ಕೃಷಿ ಸಾಲದ ಹೊರೆ ಸಹಿಸಲಾಗದೆ ಬಾಡೂರಿನಲ್ಲಿ ಕೃಷಿಕ ವಿಷ ಸೇವಿಸಿ ಆತ್ಮಹತ್ಯೆ

ಕಾಸರಗೋಡು: ಕೃಷಿ ಸಾಲದ ಹೊರೆ ಸಹಿಸಲಾಗದೆ ಪುತ್ತಿಗೆ ಸಮೀಪದ ಬಾಡೂರು ನೈಮೊಗರುವಿನ ದೂಮಣ್ಣ ರೈ (58) ಎಂಬವರು ವಿಷ ಸೇವಿಸಿ ಆತ್ಮಹತ್ಯೆಗೈದಿದ್ದಾರೆ. ಶನಿವಾರ ಮನೆಯಲ್ಲಿ ವಿಷ ಸೇವಿಸಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದ ಇವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟರು.
ಪ್ರಗತಿಪರ ಕೃಷಿಕರಾಗಿದ್ದ ಇವರು ಗ್ರಾಮೀಣ ಬ್ಯಾಂಕ್ ಮತ್ತು ಜಿಲ್ಲಾ ಬ್ಯಾಂಕ್ ನಿಂದ ಹಣ ಸಾಲ ಪಡೆದು ನಡೆಸಿದ ಕೃಷಿ ಬೆಳೆಯು ಪ್ರಕೃತಿ ವಿಕೋಪದಿಂದ ನಾಶಗೊಂಡಿತ್ತೆಂದು ಹೇಳಲಾಗಿದೆ. ಅಲ್ಲದೆ ಉಳಿದ ಕೃಷಿ ಉತ್ಪನ್ನಗಳಿಗೆ ನ್ಯಾಯವಾದ ಬೆಲೆ ಸಿಗದೆ ಅಪಾರ ನಷ್ಟ ಉಂಟಾಗಿತ್ತು. ಈ ಎಲ್ಲ ಕಾರಣಗಳಿಂದ ಸಾಲದ ಮೊತ್ತ ಮರುಪಾವತಿಸಲು ಸಾಧ್ಯವಾಗಿರಲಿಲ್ಲ. ಮಾತ್ರವಲ್ಲದೆ ಸಾಲದ ಮೊತ್ತ ಬಡ್ಡಿ ಸೇರಿದಂತೆ ಸುಮಾರು 40 ಲಕ್ಷ ರೂಪಾಯಿ ವರೆಗೆ ತಲುಪಿದ್ದು , ಇದರಿಂದ ಬ್ಯಾಂಕ್ ಗಳು ಜಪ್ತಿ ಕ್ರಮ ಆರಂಭಿಸಿವೆಯೆಂದು ತಿಳಿದುಬಂದಿದೆ.
ಕಳೆದ ಮೂರು ದಿನಗಳ ಹಿಂದೆ ಈ ಬಗ್ಗೆ ನ್ಯಾಯಾಲಯದಿಂದ ನೋಟೀಸ್ ಬಂದಿರುವುದಾಗಿ ಮನೆಯವರು ತಿಳಿಸಿದ್ದಾರೆ. ಮೃತರು ಪತ್ನಿ ಮಾಲತಿ ರೈ , ಮಕ್ಕಳಾದ ಅಶ್ವಥ್, ಅಕ್ಷಿತಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss