Wednesday, August 10, 2022

Latest Posts

ಕಾಸರಗೋಡು| ಕೇರಳದಲ್ಲಿ ಮತ್ತೆ 29 ಮಂದಿಗೆ ಸೋಂಕು: ಕಾಸರಗೋಡು ಜಿಲ್ಲೆಯಲ್ಲಿ ಇಬ್ಬರಿಗೆ ಕೋವಿಡ್

ಕಾಸರಗೋಡು: ಕೇರಳ ರಾಜ್ಯದಲ್ಲಿ ಸೋಮವಾರ ಮತ್ತೆ 29 ಮಂದಿಗೆ ಕೊರೋನಾ ವೈರಸ್ ಸೋಂಕು ದೃಢೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಇವರಲ್ಲಿ 21 ಮಂದಿ ವಿದೇಶದಿಂದ ಬಂದವರು. 7 ಮಂದಿ ಇತರ ರಾಜ್ಯಗಳಿಂದ ಬಂದವರು. ಕಣ್ಣೂರಿನ ಒಬ್ಬರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಇದೇ ವೇಳೆ ಕಾಸರಗೋಡು ಜಿಲ್ಲೆಯಲ್ಲಿ ಇಬ್ಬರಿಗೆ ಕೊರೋನಾ ಸೋಂಕು ದೃಢೀಕರಿಸಲಾಗಿದೆ.
ಕೊಲ್ಲಂ-6, ತೃಶ್ಶೂರು-4, ತಿರುವನಂತಪುರ-3, ಕಣ್ಣೂರು-3, ಪತ್ತನಂತಿಟ್ಟ-2, ಆಲಪ್ಪುಳ-2, ಕೋಟ್ಟಯಂ-2, ಕಲ್ಲಿಕೋಟೆ-2, ಕಾಸರಗೋಡು-2, ಎರ್ನಾಕುಳಂ-1, ಪಾಲ್ಘಾಟ್-1, ಮಲಪ್ಪುರಂ-1 ಎಂಬಂತೆ ರೋಗ ಬಾಧಿಸಿದೆ. ಈ ತನಕ ರಾಜ್ಯದಲ್ಲಿ ಒಟ್ಟು 630 ಮಂದಿಗೆ ರೋಗ ಬಾಧಿಸಿದೆ. ರಾಜ್ಯದಲ್ಲಿ ಒಟ್ಟು 130 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಒಟ್ಟು 67789 ಮಂದಿ ನಿಗಾವಣೆಯಲ್ಲಿದ್ದಾರೆ. ಈ ಪೈಕಿ 67316 ಮಂದಿ ಮನೆಗಳಲ್ಲೂ, 473 ಮಂದಿ ಆಸ್ಪತ್ರೆಗಳಲ್ಲೂ ನಿಗಾವಣೆಯಲ್ಲಿದ್ದಾರೆ. ಸೋಮವಾರ ರಾಜ್ಯದಲ್ಲಿ ಶಂಕಿತ 127 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ತನಕ 45905 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದ್ದು ಲಭ್ಯ 44651 ನೆಗೆಟಿವ್ ಆಗಿದೆ.
ಮೇ 31 ರ ವರೆಗೆ ಕೇಂದ್ರ ಸರಕಾರ ಲಾಕ್ ಡೌನ್ ಮುಂದುವರಿಸಿರುವುದರಿಂದ ಕೆಲವೊಂದು ನಿಯಂತ್ರಣಗಳನ್ನು ಏರ್ಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ಹೇಳಿದ್ದಾರೆ. ಶಾಲಾ ಕಾಲೇಜು, ಟ್ರೈನಿಂಗ್ ಸೆಂಟರ್‍ಗಳಿಗೆ ಅನುಮತಿಯಿಲ್ಲ. ಆನ್‍ಲೈನ್ ಶಿಕ್ಷಣವನ್ನು ಪ್ರೊತ್ಸಾಹಿಸಲಾಗುವುದು ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss