Thursday, August 11, 2022

Latest Posts

ಕಾಸರಗೋಡು| ಕೇರಳ ಎಸ್ಎಸ್ಎಲ್ ಸಿ ಮತ್ತು ಪ್ಲಸ್ ಟು ಪರೀಕ್ಷೆ ಮತ್ತೆ ಮುಂದೂಡಿಕೆ : ಜೂನ್ 6 ರಿಂದ ನಡೆಯುವ ಸೂಚನೆ

ಕಾಸರಗೋಡು: ಕೋವಿಡ್ – 19 ಲಾಕ್ ಡೌನ್ ಕಾರಣದಿಂದಾಗಿ ಬಾಕಿ ಉಳಿದಿರುವ ಕೇರಳ ಎಸ್‍ಎಸ್‍ಎಲ್‍ಸಿ ಮತ್ತು ಪ್ಲಸ್ ಟು ಪರೀಕ್ಷೆಗಳನ್ನು ಮತ್ತೆ ಮುಂದೂಡಲಾಗಿದೆ. ಈ ಪರೀಕ್ಷೆಗಳು ಜೂನ್ 6 ರಿಂದ ನಡೆಯುವ ಸಾಧ್ಯತೆಯಿದೆ ಎಂದು ಕೇರಳ ಸರಕಾರವು ಸೂಚನೆ ನೀಡಿದೆ.
ಮೇ 26 ರಿಂದ ಮೂರು ದಿನಗಳ ವರೆಗೆ ಈ ಪರೀಕ್ಷೆಗಳು ನಡೆಯಲಿವೆ ಎಂದು ಈ ಹಿಂದೆ ಸರಕಾರವು ಪ್ರಕಟಿಸಿತ್ತು. ಆದರೆ ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಕೊರೋನಾ ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಮುಂದೂಡಿ ಆದೇಶಿಸಲಾಗಿದೆ. ಇದೇ ವೇಳೆ
ಮುಂದೆ ಪರೀಕ್ಷೆ ನಡೆಯುವಾಗಲೂ ಸಂಪೂರ್ಣ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ರೀತಿಯಲ್ಲಿ ಆಯೋಜನೆಯಾಗಲಿದೆ. ಅದರಂತೆ ಪರೀಕ್ಷೆಯ ಹೊಸ ವೇಳಾಪಟ್ಟಿ ತಯಾರಿಸಲು ಸಿದ್ಧತೆ ನಡೆಯುತ್ತಿದೆ ಎಂದು ತಿರುವನಂತಪುರ ಪರೀಕ್ಷಾ ಭವನದ ವರದಿ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss