ಕಾಸರಗೋಡು| ಕೇರಳ ಮುಖ್ಯಮಂತ್ರಿ ದುರಂತ ಪರಿಹಾರ ನಿಧಿಗೆ ಕನ್ನಡ ಸಿನಿಮಾ ಬಾಲನಟ 10025 ರೂ. ದೇಣಿಗೆ

0
302

ಕಾಸರಗೋಡು: ಕೇರಳ ಮುಖ್ಯಮಂತ್ರಿ ಅವರ ದುರಂತ ನಿವಾರಣಾ ನಿಧಿಗೆ 10025 ರೂ. ದೇಣಿಗೆ ನೀಡುವ ಮೂಲಕ ಕಾಸರಗೋಡಿನ ಕನ್ನಡ ಸಿನಿಮಾ ಬಾಲನಟನೋರ್ವ ಮಾದರಿಯಾಗಿದ್ದಾರೆ. ಕಾಸರಗೋಡು ಜಿಲ್ಲೆಯ ವಿದ್ಯಾನಗರ ಬಳಿಯ ಪುದುಮಣ್ಣು ನಿವಾಸಿ ಎಂ.ಎಸ್.ಸಾಯಿಕೃಷ್ಣ ಈ ರೀತಿ ಉದಾರತೆ ಮೆರೆದವರು.

ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಿಧಿಯನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಹಸ್ತಾಂತರಿಸಿದ್ದಾರೆ. ವೈದಿಕ ಸಮಾರಂಭಗಳ ಭೋಜನ ವೇಳೆ ಲಭಿಸುವ ದಕ್ಷಿಣೆಯನ್ನು ಸಂಗ್ರಹಿಸುವ ಮೂಲಕ ಈ ನಿಧಿ ರೂಪುಗೊಂಡಿದೆ ಎಂದು ಅವರು ತಿಳಿಸಿದರು. 7 ನೇ ತರಗತಿ ವಿದ್ಯಾರ್ಥಿಯಾಗಿರುವ ಸಾಯಿಕೃಷ್ಣ ಅವರು, ಬಹುಮುಖ ಪ್ರತಿಭೆಯಾಗಿದ್ದಾರೆ. ಇವರು ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿ ಕೃಷ್ಣ ಕುಮಾರ್ ಮತ್ತು ಶಿಕ್ಷಕಿ ಸ್ವಪ್ನಾ ದಂಪತಿಯ ಪುತ್ರ.

LEAVE A REPLY

Please enter your comment!
Please enter your name here