ಕಾಸರಗೋಡು| ಕೊರೋನಾದಲ್ಲಿ ಹೊಸ ದಾಖಲೆ ಸೃಷ್ಟಿಸಿದ ಕೇರಳ : ಶುಕ್ರವಾರ ಬರೋಬ್ಬರಿ 42 ಮಂದಿಯಲ್ಲಿ ವೈರಸ್ ಪತ್ತೆ

0
507

ಕಾಸರಗೋಡು: ಕೇರಳದಲ್ಲಿ ಶುಕ್ರವಾರ ಬರೋಬ್ಬರಿ 42 ಮಂದಿಯಲ್ಲಿ ಕೊರೋನಾ ವೈರಸ್ ಸೋಂಕು ದೃಢಪಡಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಹೊಸ ದಾಖಲೆಯೊಂದು ಸೃಷ್ಟಿಯಾಗಿದೆ.
ಈ ಹಿಂದೆ ಗರಿಷ್ಠ ಎಂಬಂತೆ ಒಂದೇ ದಿನದಲ್ಲಿ 39 ಮಂದಿಗೆ ಕೊರೋನಾ ಅಟ್ಯಾಕ್ ಆಗಿತ್ತು. ಇದೀಗ ಆ ದಾಖಲೆಯನ್ನು ಮುರಿದಂತಾಗಿದೆ.
ಕಣ್ಣೂರಿನಲ್ಲಿ 12, ಕಾಸರಗೋಡಿನಲ್ಲಿ 7, ಪಾಲಕ್ಕಾಡು -5, ಕೋಝೀಕ್ಕೋಡು -5, ತ್ರಿಶೂರು- 4, ಮಲಪ್ಪುರ- 4, ಕೋಟಯಂ-2, ಪತ್ತನಂತಿಟ್ಟ – 1, ವಯನಾಡು -1 ಮತ್ತು ಕೊಲ್ಲಂ ಜಿಲ್ಲೆಯಲ್ಲಿ ಒಬ್ಬರಿಗೆ ಕೊರೋನಾ ವೈರೆಸ್ ಬಾಧಿಸಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರಾಜ್ಯದಲ್ಲಿ ಶುಕ್ರವಾರ ಇಬ್ಬರು ಮಾತ್ರ ಕೋವಿಡ್ -19 ಮುಕ್ತರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ವಿದೇಶಗಳಿಂದ ಮತ್ತು ಹೊರ ರಾಜ್ಯಗಳಿಂದ ಆಗಮಿಸುವ ಬಹುತೇಕ ಮಂದಿಗೆ ಕೊರೋನಾ ಸೋಂಕು ಬಾಧಿಸಿದ್ದು ಅವರೆಲ್ಲರೂ ಇದೀಗ ತಮ್ಮ ತವರೂರು ಕೇರಳಕ್ಕೆ ಆಗಮಿಸುತ್ತಿದ್ದಾರೆ. ರಾಜ್ಯದಲ್ಲಿ ಕೊರೋನಾ ವೈರಸ್ ಅನ್ನು ಸಾಮಾಜಿಕವಾಗಿ ಪಸರಿಸದಂತೆ ಗರಿಷ್ಠ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು. ಈ ನಿಟ್ಟಿನಲ್ಲಿ ಯಾರೂ ಭಯಪಡಬೇಕಾಗಿಲ್ಲವೆಂದು ಅವರು ತಿಳಿಸಿದರು. ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 7 ಮಂದಿ ಕೊರೋನಾ ಪೀಡಿತರಾಗಿದ್ದು ಅವರಲ್ಲಿ 5 ಮಂದಿ ಕುಂಬಳೆಯವರು. ಉಳಿದಂತೆ ಪುತ್ತಿಗೆ ಮತ್ತು ಮುಳಿಯಾರು ಪಂಚಾಯತ್ ವ್ಯಾಪ್ತಿಯ ತಲಾ ಓರ್ವನಿಗೆ ಕೊರೋನಾ ಬಾಧಿಸಿದೆ. ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣದಲ್ಲಿ ಇದ್ದರೂ, ವಿದೇಶಗಳಿಂದ ಮತ್ತು ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯಗಳಿಂದ ಆಗಮಿಸುವವರ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಅವರಲ್ಲಿ ಬಹುತೇಕ ಮಂದಿಗೆ ಈ ಮಹಾಮಾರಿ ಸೋಂಕು ತಗಲಿರುವುದು ವರದಿಯಾಗುತ್ತಿದೆ. ಅವರೆಲ್ಲರೂ ಸರಕಾರಿ ನಿಗಾ ಕೇಂದ್ರಗಳಲ್ಲಿ ತೀವ್ರ ನಿಗಾದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಇನ್ನಷ್ಟು ಹೆಚ್ಚು ಅಂಕಿ ಸಂಖ್ಯೆ ದೊರಕಬಹುದೆಂದು ಅಂದಾಜಿಸಲಾಗಿದೆ.

LEAVE A REPLY

Please enter your comment!
Please enter your name here