Thursday, November 26, 2020

Latest Posts

ಕೋಲಾರವನ್ನೂ ಕಾಡುತ್ತಿರುವ ‘ನಿವಾರ್’: ಜನಜೀವನ ಅಸ್ತವ್ಯಸ್ತ, ಹಾನಿ ತಪ್ಪಿಸಲು ಜಿಲ್ಲಾಡಳಿತ ಕಟ್ಟೆಚ್ಚರ

ಹೊಸ ದಿಗಂತ ವರದಿ, ಕೋಲಾರ: ನಿವಾರ್ ಚಂಡಮಾರುತದಿಂದಾಗಿ ಜಿಲ್ಲೆಯಲ್ಲಿ ಮುಂಜಾನೆ 3 ಗಂಟೆಯಿಂದಲೇ ಸತತ ಮಳೆಯಾಗಿದ್ದು, ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಜನಜೀವನ ಅಸ್ಥವ್ಯಸ್ತವಾಗಿದ್ದು, ಮಳೆ ಹಾನಿ ತಪ್ಪಿಸಲು ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ. ಸತತ ಜಡಿ,ಧಾರಾಕಾರ...

ಮುಸುಕುಧಾರಿಗಳ ತಂಡದಿಂದ ಗೂಡ್ಸ್ ವಾಹನ ಅಡ್ಡಗಟ್ಟಿ ನಗ-ನಾಣ್ಯ ದರೋಡೆ

ಹೊಸ ದಿಗಂತ ವರದಿ, ಮದ್ದೂರು : ದ್ವಿಚಕ್ರ ವಾಹನಗಳಲ್ಲಿ ಬಂದ ಆರು ಮಂದಿಯ ಅಪರಿಚಿತ ಮುಸುಕುಧಾರಿಗಳ ತಂಡ ಗೂಡ್ಸ್ ವಾಹನ ಅಡ್ಡಗಟ್ಟಿ ನಗ-ನಾಣ್ಯ ದರೋಡೆ ಘಟನೆ ತಾಲೂಕಿನ ಭಾರತೀನಗರ ಸಮೀಪದ ಮುಡೀನಹಳ್ಳಿ ಗೇಟ್...

ಕಾರ್ಯಕರ್ತರಿಗೆ ಶಕ್ತಿ ತುಂಬುವ ಗ್ರಾಮ ಸ್ವರಾಜ್ ಸಮಾವೇಶ: ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ

ಹೊಸ ದಿಗಂತ ವರದಿ, ಚಿತ್ರದುರ್ಗ: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ನ.28 ರಂದು ಗ್ರಾಮ ಸ್ವರಾಜ್ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ತಿಳಿಸಿದರು. ನಗರದ...

ಕಾಸರಗೋಡು| ಕೊರೋನಾ ಆತಂಕದ ನಡುವೆ ಇಲಿಜ್ವರ ಭೀತಿ: ಮುಂಜಾಗ್ರತೆ ಪಾಲಿಸಲು ಜಿಲ್ಲಾ ವೈದ್ಯಾಧಿಕಾರಿ ಸಲಹೆ

ಕಾಸರಗೋಡು: ಮಳೆಗಾಲ ಬಿರುಸುಗೊಂಡಿದ್ದು , ಕಾಸರಗೋಡು ಜಿಲೆಯಲ್ಲಿ ಇಲಿಜ್ವರ ಹರಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಗರಿಷ್ಠ ಜಾಗರೂಕತೆ ಪಾಲಿಸುವಂತೆ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ಸಲಹೆ ನೀಡಿದ್ದಾರೆ.
ದೈಹಿಕ ಕ್ಷೀಣದ ಜೊತೆಗೆ ಜ್ವರ, ತಲೆನೋವು, ಮಾಂಸಖಂಡಗಳಲ್ಲಿ ನೋವು ಇಲಿಜ್ವರದ ಲಕ್ಷಣಗಳಾಗಿವೆ. ಕಣ್ಣುಗಳಲ್ಲಿ ಕೆಂಪು ಬಣ್ಣ, ಮೂತ್ರದ ಕೊರತೆ, ಹಳದಿ ಜ್ವರದ ಲಕ್ಷಣಗಳು ತೋರಬಹುದು. ಇಲಿ, ನಾಯಿ, ಜಾನುವಾರುಗಳ ಮೂತ್ರದ ಮೂಲಕ ಇಲಿಜ್ವರ ಹರಡುತ್ತದೆ. ಮೂತ್ರದ ಮೂಲಕ ಮಣ್ಣಿನಲ್ಲಿ , ನೀರಿನಲ್ಲಿ ರೋಗಾಣು ಬೆರೆಯುತ್ತದೆ. ಇಲ್ಲಿಂದ ದೇಹದ ಗಾಯಗಳ ಮೂಲಕ ಮಾನವ ಶರೀರ ಪ್ರವೇಶಿಸುತ್ತದೆ. ಗದ್ದೆ, ಚರಂಡಿ, ಕೆರೆ, ನೀರು ಕಟ್ಟಿ ನಿಲ್ಲುವ ಪ್ರದೇಶಗಳಲ್ಲಿ ಕಾಯಕ ನಡೆಸುವವರಿಗೆ ರೋಗ ತಗುಲುವ ಸಾಧ್ಯತೆ ಅಧಿಕವಾಗಿದೆ.
ಜಾನುವಾರು ಸಾಕಣೆ ನಡೆಸುವವರು ಕೈಗಳಿಗೆ ಗ್ಲೌಸ್, ಕಾಲುಗಳಿಗೆ ದೊಡ್ಡ ಗಾತ್ರದ ಬೂಟು (ಗಂಬೂಟ್) ಧರಿಸಬೇಕು. ನಾಯಿ, ಬೆಕ್ಕು ಸಹಿತ ಪ್ರಾಣಿಗಳ ಮಲಮೂತ್ರ ಶುಚೀಕರಣ ನಡೆಸುವ ವೇಳೆ ಸುರಕ್ಷತೆ ಬಗ್ಗೆ ಜಾಗರೂಕತೆ ವಹಿಸಬೇಕು. ಜಾನುವಾರುಗಳ ಮೂತ್ರ ನೀರಿಗೆ ಸೇರ್ಪಡೆಗೊಳ್ಳದಂತೆ ನೋಡಿಕೊಳ್ಳಬೇಕು. ಆಹಾರ, ಕುಡಿಯುವ ನೀರು ಇತ್ಯಾದಿಗಳಿಗೆ ಇಲಿಯ ಸ್ಪರ್ಶ, ಮೂತ್ರ ಸೇರದಂತೆ ಜಾಗರೂಕತೆ ವಹಿಸಬೇಕು ಹಾಗೂ ಸದಾ ಮುಚ್ಚಿರುವಂತೆ ನೋಡಿಕೊಳ್ಳಬೇಕು.
ಕಟ್ಟಿ ನಿಂತ ನೀರಿನಲ್ಲಿ ಮಕ್ಕಳು ಆಟಕ್ಕಿಳಿಯದಂತೆ (ವಿಶೇಷವಾಗಿ ಶರೀರದಲ್ಲಿ ಗಾಯಗಳಿದ್ದಾಗ) ನೋಡಿಕೊಳ್ಳಬೇಕು. ಆಹಾರ ಪದಾರ್ಥಗಳನ್ನು ಎಲ್ಲೆಂದರಲ್ಲಿ ಚೆಲ್ಲುವ ಮೂಲಕ ಇಲಿಗಳು ಆಕರ್ಷಿತರಾಗುವಂತೆ ಮಾಡಬಾರದು.
ಶುಚೀಕರಣ ಕಾಯಕಗಳಲ್ಲಿ ತೊಡಗಿಕೊಂಡವರು, ಮಲಿನ ಜಲದ ಸಂಪರ್ಕದಲ್ಲಿರುವವರು, ಉದ್ಯೋಗ ಖಾತರಿ ಯೋಜನೆ ಕಾರ್ಮಿಕರು, ಕೃಷಿ ಕಾಯಕ ನಡೆಸುವವರು ಪ್ರತಿರೋಧ ಮಾತ್ರೆಗಳನ್ನು ಸೇವಿಸಬೇಕು. ಜಿಲ್ಲೆಯ ಎಲ್ಲ ಸರಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಪ್ರತಿರೋಧ ಮಾತ್ರೆಗಳು ಉಚಿತವಾಗಿ ಲಭಿಸುತ್ತವೆ. ಈ ಬಗ್ಗೆ ಯಾವುದೇ ಸಂದೇಹಗಳಿದ್ದಲ್ಲಿ ಸಮೀಪದ ಸರಕಾರಿ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

ಕೋಲಾರವನ್ನೂ ಕಾಡುತ್ತಿರುವ ‘ನಿವಾರ್’: ಜನಜೀವನ ಅಸ್ತವ್ಯಸ್ತ, ಹಾನಿ ತಪ್ಪಿಸಲು ಜಿಲ್ಲಾಡಳಿತ ಕಟ್ಟೆಚ್ಚರ

ಹೊಸ ದಿಗಂತ ವರದಿ, ಕೋಲಾರ: ನಿವಾರ್ ಚಂಡಮಾರುತದಿಂದಾಗಿ ಜಿಲ್ಲೆಯಲ್ಲಿ ಮುಂಜಾನೆ 3 ಗಂಟೆಯಿಂದಲೇ ಸತತ ಮಳೆಯಾಗಿದ್ದು, ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಜನಜೀವನ ಅಸ್ಥವ್ಯಸ್ತವಾಗಿದ್ದು, ಮಳೆ ಹಾನಿ ತಪ್ಪಿಸಲು ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ. ಸತತ ಜಡಿ,ಧಾರಾಕಾರ...

ಮುಸುಕುಧಾರಿಗಳ ತಂಡದಿಂದ ಗೂಡ್ಸ್ ವಾಹನ ಅಡ್ಡಗಟ್ಟಿ ನಗ-ನಾಣ್ಯ ದರೋಡೆ

ಹೊಸ ದಿಗಂತ ವರದಿ, ಮದ್ದೂರು : ದ್ವಿಚಕ್ರ ವಾಹನಗಳಲ್ಲಿ ಬಂದ ಆರು ಮಂದಿಯ ಅಪರಿಚಿತ ಮುಸುಕುಧಾರಿಗಳ ತಂಡ ಗೂಡ್ಸ್ ವಾಹನ ಅಡ್ಡಗಟ್ಟಿ ನಗ-ನಾಣ್ಯ ದರೋಡೆ ಘಟನೆ ತಾಲೂಕಿನ ಭಾರತೀನಗರ ಸಮೀಪದ ಮುಡೀನಹಳ್ಳಿ ಗೇಟ್...

ಕಾರ್ಯಕರ್ತರಿಗೆ ಶಕ್ತಿ ತುಂಬುವ ಗ್ರಾಮ ಸ್ವರಾಜ್ ಸಮಾವೇಶ: ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ

ಹೊಸ ದಿಗಂತ ವರದಿ, ಚಿತ್ರದುರ್ಗ: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ನ.28 ರಂದು ಗ್ರಾಮ ಸ್ವರಾಜ್ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ತಿಳಿಸಿದರು. ನಗರದ...

ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ರಂಗಧಾಮಯ್ಯ ನೇಮಕ

ಹೊಸ ದಿಗಂತ ವರದಿ, ರಾಮನಗರ : ಸರ್ಕಾರ ಒಂದು ವರ್ಷದ ನಂತರ ಮಾಗಡಿ ಯೋಜನ ಪ್ರಾಧಿಕಾರದ ಅಧ್ಯಕ್ಷರಾಗಿ ನಾಮ ನಿರ್ದೇಶನವನ್ನು ಮಾಡಿದ್ದು ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ರಂಗಧಾಮಯ್ಯ ನವರನ್ನು ನೇಮಕ ಮಾಡಿ...

Don't Miss

ಕೋಲಾರವನ್ನೂ ಕಾಡುತ್ತಿರುವ ‘ನಿವಾರ್’: ಜನಜೀವನ ಅಸ್ತವ್ಯಸ್ತ, ಹಾನಿ ತಪ್ಪಿಸಲು ಜಿಲ್ಲಾಡಳಿತ ಕಟ್ಟೆಚ್ಚರ

ಹೊಸ ದಿಗಂತ ವರದಿ, ಕೋಲಾರ: ನಿವಾರ್ ಚಂಡಮಾರುತದಿಂದಾಗಿ ಜಿಲ್ಲೆಯಲ್ಲಿ ಮುಂಜಾನೆ 3 ಗಂಟೆಯಿಂದಲೇ ಸತತ ಮಳೆಯಾಗಿದ್ದು, ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಜನಜೀವನ ಅಸ್ಥವ್ಯಸ್ತವಾಗಿದ್ದು, ಮಳೆ ಹಾನಿ ತಪ್ಪಿಸಲು ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ. ಸತತ ಜಡಿ,ಧಾರಾಕಾರ...

ಮುಸುಕುಧಾರಿಗಳ ತಂಡದಿಂದ ಗೂಡ್ಸ್ ವಾಹನ ಅಡ್ಡಗಟ್ಟಿ ನಗ-ನಾಣ್ಯ ದರೋಡೆ

ಹೊಸ ದಿಗಂತ ವರದಿ, ಮದ್ದೂರು : ದ್ವಿಚಕ್ರ ವಾಹನಗಳಲ್ಲಿ ಬಂದ ಆರು ಮಂದಿಯ ಅಪರಿಚಿತ ಮುಸುಕುಧಾರಿಗಳ ತಂಡ ಗೂಡ್ಸ್ ವಾಹನ ಅಡ್ಡಗಟ್ಟಿ ನಗ-ನಾಣ್ಯ ದರೋಡೆ ಘಟನೆ ತಾಲೂಕಿನ ಭಾರತೀನಗರ ಸಮೀಪದ ಮುಡೀನಹಳ್ಳಿ ಗೇಟ್...

ಕಾರ್ಯಕರ್ತರಿಗೆ ಶಕ್ತಿ ತುಂಬುವ ಗ್ರಾಮ ಸ್ವರಾಜ್ ಸಮಾವೇಶ: ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ

ಹೊಸ ದಿಗಂತ ವರದಿ, ಚಿತ್ರದುರ್ಗ: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ನ.28 ರಂದು ಗ್ರಾಮ ಸ್ವರಾಜ್ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ತಿಳಿಸಿದರು. ನಗರದ...
error: Content is protected !!