Wednesday, August 10, 2022

Latest Posts

ಕಾಸರಗೋಡು| ಕೊರೋನಾ ಬಾಧಿಸಿ ಕೇರಳದಲ್ಲಿ ಮತ್ತೊಂದು ಸಾವು: ಕಣ್ಣೂರು ಧರ್ಮಡಂ ನಿವಾಸಿ ಮೃತ್ಯು

ಕಾಸರಗೋಡು: ಕೇರಳದಲ್ಲಿ ಸೋಮವಾರ ರಾತ್ರಿ ಕೋವಿಡ್ ಬಾಧಿಸಿ ಕೋಝಿಕ್ಕೋಡಿನಲ್ಲಿ ಚಿಕಿತ್ಸೆಯಲ್ಲಿದ್ದವರು ಮರಣ ಹೊಂದಿದ ಘಟನೆ ನಡೆದಿದೆ. ಕಣ್ಣೂರು ಧರ್ಮಡಂ ನಿವಾಸಿ ಆಸಿಯಾ (61) ಮೃತಪಟ್ಟ ದುರ್ದೈವಿ.

ಕಳೆದ ಎರಡು ದಿನಗಳ ಹಿಂದೆ ಅಸೌಖ್ಯ ಕಾರಣ ಕೋಝಿಕ್ಕೋಡ್ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಇವರಿಗೆ ಕೋವಿಡ್ ಹೇಗೆ ಹರಡಿತು ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಪರಿಶೀಲನೆಗಳು ನಡೆಯುತ್ತಿವೆ.

ಈ ಮಧ್ಯೆ ಆಯಿಷಾ ಇತರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಹೈಪರ್ ಟೆನ್ಯನ್ ಹಾಗೂ ಮೂತ್ರಜನಕಾಂಗ ಸೋಂಕಿನಿಂದ ಬಳಲುತ್ತಿದ್ದರು. ಈ ಮಧ್ಯೆ ಶನಿವಾರ ಅಸೌಖ್ಯ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭ ನ್ಯುಮೋನಿಯಾ ಸೋಂಕು ಇರುವುದು ಕಂಡುಬಂದಿದ್ದು, ಬಳಿಕ ನಡೆಸಿದ ಸಮಗ್ರ ಪರೀಕ್ಷೆಯಲ್ಲಿ ಕೋವಿಡ್ ಇರುವುದು ದೃಢಪಟ್ಟಿತು.

ಈ ನಡುವೆ ಸೋಮವಾರ ರಾತ್ರಿ ಅವರು ನಿಧನರಾದರು. ಇವರ ಕುಟುಂಬದ ಎಂಟು ಮಂದಿ ಸದಸ್ಯರನ್ನು ಇದೀಗ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss