Thursday, August 18, 2022

Latest Posts

ಕಾಸರಗೋಡು: ಕೋವಿಡ್ ನಿಗಾ ಕೇಂದ್ರದಿಂದ ಕೊಲೆಯತ್ನ ಪ್ರಕರಣದ ಆರೋಪಿ ಎಸ್ಕೇಪ್!

ಮಂಗಳೂರು: ಮುಸ್ಲಿಂ ಲೀಗ್ ಕಾರ್ಯಕರ್ತನ ಕೊಲೆಯತ್ನ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಯೋರ್ವ, ಆತನನ್ನು ಇರಿಸಲಾಗಿದ್ದ ಕೋವಿಡ್ ನಿಗಾ ಕೇಂದ್ರದಿಂದ ಮಂಗಳವಾರ ರಾತ್ರಿ ಪರಾರಿಯಾಗಿದ್ದು, ಈತನ ಪತ್ತೆಗಾಗಿ ಪೊಲೀಸರು ಬಲೆಬೀಸಿದ್ದಾರೆ.
ಉಪ್ಪಳ ಕೈಕಂಬದ ನಿವಾಸಿ ಆದಂ ಖಾನ್ (24) ಪರಾರಿಯಾದ ಆರೋಪಿಯಾಗಿದ್ದು, ಈತ 2019 ರ ಡಿ. 26 ರಂದು ನಡೆದಿದ್ದ ಮುಸ್ಲಿಂ ಲೀಗ್ ಕಾರ್ಯಕರ್ತ ಉಪ್ಪಳದ ಮುಸ್ತಫಾ ಎಂಬವರ ಕೊಲೆಗೆ ಯತ್ನಿಸಿದ ಪ್ರಕರಣದ ಆರೋಪಿಯಾಗಿದ್ದಾನೆ.
ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದ ಆದಂ ಖಾನ್ ಹಾಗೂ ಈತನ ಸಹಚರ ನೌಶಾದ್ ನನ್ನು ಕಾಸರಗೋಡು ಡಿವೈಎಸ್‌ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿತ್ತು. ನ್ಯಾಯಾಲಯದ ಪ್ರಕ್ರಿಯೆ ನಡೆದು ಈತನನ್ನು ಕೋವಿಡ್ ನಿಗಾ ಕೇಂದ್ರದಲ್ಲಿ ಇರಿಸಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!