Thursday, August 11, 2022

Latest Posts

ಕಾಸರಗೋಡು| ಖಾಸಗಿ ಬಸ್ ಉದ್ಯಮ ಉಳಿಸಲು ಆಗ್ರಹಿಸಿ ಮಾಲಿಕರಿಂದ ಪ್ರತಿಭಟನೆ

ಕಾಸರಗೋಡು: ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಕೇರಳ ಸ್ಟೇಟ್ ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಷನ್ ನ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಖಾಸಗಿ ಬಸ್ ಉದ್ಯಮವನ್ನು ಸಂರಕ್ಷಿಸಬೇಕು, ರಾಮಚಂದ್ರನ್ ಸಮಿತಿಯ ವರದಿಯನ್ನು ಅಂಗೀಕರಿಸಬೇಕು, ಕೇಂದ್ರದ ಪ್ರಥಮ ಎನ್ ಡಿಎ ಸರಕಾರ ಅಧಿಕಾರಕ್ಕೇರುವಾಗ ಇದ್ದಂತೆಯೇ ಡೀಸೆಲ್ ನ ತೆರಿಗೆ ಉಳಿಸಬೇಕು, ಕೇರಳ ಸರಕಾರಕ್ಕೆ ಹೆಚ್ಚುವರಿಯಾಗಿ ಲಭಿಸುವ ಡೀಸೆಲ್ ತೆರಿಗೆ ಕೈಬಿಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಯನ್ನು ಹಮ್ಮಿಕೊಳ್ಳಲಾಯಿತು.
ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಪ್ರತಿಭಟನೆಯನ್ನು ಉದ್ಘಾಟಿಸಿದರು. ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸತ್ಯನ್ ಪೂಚಕ್ಕಾಡ್, ಸಿ.ಎ.ಮುಹಮ್ಮದ್ ಕುಂಞ, ಎಂ. ಹಸೈನಾರ್, ಲಕ್ಷ್ಮಣನ್, ಪಿ.ಎ. ಮುಹಮ್ಮದ್ ಕುಂಞ, ಸಿ.ರವಿ, ಎನ್.ಎಂ.ಹಸೈನಾರ್, ಸುಬ್ಬಣ್ಣ ಆಳ್ವ ಮುಂತಾದವರು ಮಾತನಾಡಿದರು.
ಇದೇ ವೇಳೆ ಜರಗಿದ ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಎಂ.ಪಿ.ವೀರೇಂದ್ರ ಕುಮಾರ್, ಪಿ.ಗಂಗಾಧರನ್ ನಾಯರ್, ಮೆಟ್ರೋ ಮುಹಮ್ಮದ್ ಹಾಜಿ, ಕೆ.ವಿ.ಕುಂಞರಾಮನ್, ಚಾಲಕ ಕಕ್ಕೋಡಿ ಸಂತೋಷ್ ಅವರ ಅಗಲುವಿಕೆಗೆ ಸಂತಾಪ ಸೂಚಿಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss