Tuesday, July 5, 2022

Latest Posts

ಕಾಸರಗೋಡು ಜಿಲ್ಲಾ ಪಂಚಾಯತ್ ಚುನಾವಣೆ: ಹೊಸ ಮುಖಗಳಿಗೆ ಮಣೆ!

ಹೊಸ ದಿಗಂತ ಆನ್‌ಲೈನ್ ಡೆಸ್ಕ್:

ಕಾಸರಗೋಡು ಜಿಲ್ಲಾ ಪಂಚಾಯತ್ ಚುನಾವಣೆ ಅಖಾಡ ರಂಗೇರಿದ್ದು, ಈ ಬಾರಿ ಮೂರು ಪಕ್ಷಗಳು ಹೊಸ ಮುಖಗಳಿಗೆ ಆದ್ಯತೆ ನೀಡುವ ಮೂಲಕ ಗಮನಸೆಳೆದಿವೆ.

ನಾಮಪತ್ರ ಸಲ್ಲಿಕೆಗೆ ಇನ್ನು ಒಂದೇ ದಿನ ಬಾಕಿ ಉಳಿದಿರುವಂತೆಯೇ ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಡಿ.14 ರಂದು ಜಿಲ್ಲಾ ಪಂಚಾಯತ್ ಅಲ್ಲದೆ ಆರು ಬ್ಲಾಕ್ ಪಂಚಾಯತ್, ಮೂರು ನಗರಸಭೆ, 38 ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆಯಲಿದೆ.

ಈಗಾಗಲೇ ಎಲ್‌ಡಿಎಫ್ ತನ್ನ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದೆ. ಒಟ್ಟು 17 ಸ್ಥಾನಗಳ ಪೈಕಿ ಸಿಪಿಐಎಂ ಹತ್ತು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಸಿಪಿಐ 3, ಕೇರಳ ಕಾಂಗ್ರೆಸ್ ಎಂ, ಎಲ್‌ಜೆ ಡಿ, ಐಎನ್‌ಎಲ್‌ಗೆ ತಲಾ ಒಂದು ಸ್ಥಾನ ನೀಡಲಾಗಿದೆ. ಅಲ್ಲದೆ ಯುಡಿಎಫ್‌ನಲ್ಲಿ ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್ ತಲಾ ಎಂಟು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಒಂದು ಸ್ಥಾನ ಸಿಎಂಪಿಗೆ ನೀಡಲಾಗಿದೆ. ಬಿಜೆಪಿ 17 ಸ್ಥಾನಗಳಲ್ಲಿಯೂ ಸ್ಪರ್ಧಿಸಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss