Thursday, August 11, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಕೆಂಪುಕಲ್ಲು , ಕಗ್ಗಲ್ಲು , ಹೊಯ್ಗೆ ಅಕ್ರಮ ಗಣಿಗಾರಿಕೆ

ಹೊಸ ದಿಗಂತ ವರದಿ, ಕಾಸರಗೋಡು:

ಸರಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವಾಗ ಕಾಸರಗೋಡು ಜಿಲ್ಲೆಯಲ್ಲಿ ಕೆಂಪುಕಲ್ಲು , ಕಗ್ಗಲ್ಲು , ಹೊಯ್ಗೆ ಮುಂತಾದ ಮಾಫಿಯಾಗಳು ತಮ್ಮ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿವೆ.
ಅದರಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೆಂಪುಕಲ್ಲು ಗಣಿಗಾರಿಕೆ ಅನಧಿಕೃತವಾಗಿ ವ್ಯಾಪಕವಾಗಿ ನಡೆಯುತ್ತಿದೆ. ಕೊಯಿಪ್ಪಾಡಿ ಗ್ರಾಮ ವ್ಯಾಪ್ತಿಯ ನಾಯ್ಕಾಪು ಸಮೀಪ ಲೋಡ್ ಗಟ್ಟಲೆ ಅಕ್ರಮ ಕೆಂಪುಕಲ್ಲು ಕಡಿದು ಸಾಗಿಸುತ್ತಿರುವುದಾಗಿ ಆರೋಪ ಉಂಟಾಗಿದೆ. ಅಲ್ಲದೆ ಬೇಳ ಗ್ರಾಮ ವ್ಯಾಪ್ತಿಯಲ್ಲೂ , ಸೀತಾಂಗೋಳಿ ಕಿನ್ಫ್ರಾ ಪಾರ್ಕ್ ನ ಮುಂಭಾಗದಲ್ಲೂ ಕೆಂಪುಕಲ್ಲು ಗಣಿಗಾರಿಕೆ ಬಿರುಸಿನಿಂದ ನಡೆಯುತ್ತಿದೆ ಎಂದು ನಾಗರಿಕರು ತಿಳಿಸಿದ್ದಾರೆ.
ಪೊಲೀಸರು ಈ ಪ್ರದೇಶದಲ್ಲಿ ಸಂಚರಿಸುತ್ತಿರುವುದರಿಂದ ಕೆಂಪುಕಲ್ಲು ಸಾಗಾಟ ತಂಡವು ಹಗಲು ಹೊತ್ತಿನಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ.
ಆರ್ ಡಿಓರಿಂದ ಪರಿಸರ ಅನುಮತಿ ಸರ್ಟಿಫಿಕೇಟ್ ಗಳು, ಜಿಯೋಲಜಿ ಇಲಾಖೆಯ ಪರ್ಮಿಟ್ ಇದ್ದರೆ ಮಾತ್ರವೇ ಕೆಂಪುಕಲ್ಲು , ಕಗ್ಗಲ್ಲು ಸಹಿತ ಯಾವುದೇ ಗಣಿಗಾರಿಕೆ ನಡೆಸಬಹುದಾಗಿದೆ. ಮಾತ್ರವಲ್ಲದೆ ಈ ರೀತಿ ಗಣಿಗಾರಿಕೆ ನಡೆಸಲು ಸರಕಾರಕ್ಕೆ ರೋಯಲ್ಟಿ ನೀಡಬೇಕಾಗಿದೆ. ಆದರೆ ಇದ್ಯಾವುದೂ ಇಲ್ಲದೆ ಜಿಲ್ಲೆಯ ವಿವಿಧೆಡೆ ಕೆಂಪುಕಲ್ಲು , ಕಗ್ಗಲ್ಲು ಹಾಗೂ ಹೊಯ್ಗೆ ಇತ್ಯಾದಿ ಅಕ್ರಮ ಸಾಗಾಟ ನಡೆಯುತ್ತಿರುವುದಾಗಿ ವ್ಯಾಪಕ ಆರೋಪಗಳಿವೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತುರ್ತು ಗಮನ ಹರಿಸಬೇಕಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss