Monday, August 8, 2022

Latest Posts

ಕಾಸರಗೋಡು – ಜಿಲ್ಲೆಯಲ್ಲಿ ಕೊರೋನಾ ಕಾನೂನು ಉಲ್ಲಂಘನೆ: ಸಿಪಿಎಂ ನೇತಾರನ ವಿರುದ್ಧ ಕಠಿಣ ಕೇಸು ದಾಖಲು

ಕಾಸರಗೋಡು: ಕೋವಿಡ್ ಗೆ ಸಂಬಂಧಿಸಿದಂತೆ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದ ಸಾಮಾಜಿಕ ಕಾರ್ಯಕರ್ತ, ಸಿಪಿಎಂ ಪಕ್ಷದ ನಾಯಕನ ವಿರುದ್ಧ ಪೊಲೀಸರು ಕಠಿಣ ಕೇಸು ದಾಖಲಿಸಿದ್ದಾರೆ.

ಕೋವಿಡ್ ಭೀತಿಯ ಮಧ್ಯೆಯೇ ತಾನು ಕೋವಿಡ್ ಬಾಧಿಸಿದ ಸಂಬಂಧಿಕನನ್ನು ಕಾರಿನಲ್ಲಿ ತಲಪ್ಪಾಡಿ ಗಡಿಯಿಂದ ಕರೆ ತಂದಿರುವುದು ಮತ್ತು ಬಳಿಕ ಕಾಡಿದ ಅನಾರೋಗ್ಯವನ್ನು ಮುಚ್ಚಿಟ್ಟಿರುವ ಹಿನ್ನೆಲೆಯಲ್ಲಿ ಮಂಜೇಶ್ವರ ಪೊಲೀಸರು ಆತನ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.

ಜಿಲ್ಲಾ ವೈದ್ಯಾಧಿಕಾರಿ ಆತನ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ನೀಡಿದ ಆದೇಶದನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ ಕೊರೋನಾ ರೋಗ ದೃಢಗೊಂಡಿರುವ ಪೈವಳಿಕೆ ಚಿಪ್ಪಾರು ಪ್ರದೇಶದ ಈ ಸಿಪಿಎಂ ನೇತಾರ ಮತ್ತವನ ಕುಟುಂಬವನ್ನು ಉಕ್ಕಿನಡ್ಕದ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಮಹಾರಾಷ್ಟ್ರದಿಂದ ಊರಿಗೆ ಮರಳಲು ದಾಖಲಾತಿ ನಡೆಸದೆ ತಲಪ್ಪಾಡಿಗೆ ತಲುಪಿದ್ದ ತನ್ನ ಸಂಬಂಧಿಕನನ್ನು ಕರೆದೊಯ್ಯಲು ಪತ್ನಿ ಮತ್ತು ಮಕ್ಕಳ ಸಹಿತ ತನ್ನ ಕಾರಿನಲ್ಲಿ ಆಗಮಿಸಿದ ಈ ರಾಜಕೀಯ ನೇತಾರ ಬಳಿಕ ಅಧಿಕೃತರಿಂದ ವಿಷಯವನ್ನು ಮರೆಮಾಚಲು ಯತ್ನಿಸಿದ್ದನು ಎಂದು ದೂರಲಾಗಿದೆ.

ಕೋವಿಡ್ ನಿಯಮಾವಳಿಗಳ ಭಾಗವಾಗಿ ಜಿಲ್ಲಾಡಳಿತವು ಹೊರಡಿಸಿರುವ ಅಧಿಸೂಚನೆಯನ್ನು ಸಿಪಿಎಂಗೆ ಸೇರಿದ ಈ ರಾಜಕೀಯ ನೇತಾರನು ಉಲ್ಲಂಘಿಸಿದ್ದಾನೆ ಎಂಬ ಆರೋಪ ಹೊರಿಸಲಾಗಿದೆ. ಇದೇ ವೇಳೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಈ ಪ್ರಕರಣದ ಕುರಿತು ಹೆಚ್ಚಿನ ಸಮಗ್ರ ವಿಚಾರಣೆಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss