spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಳ: ಕರ್ನಾಟಕಕ್ಕೆ ದೈನಂದಿನ ಪ್ರಯಾಣ ಪಾಸ್ ವ್ಯವಸ್ಥೆ ಸ್ಥಗಿತ

- Advertisement -Nitte

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗಂಭೀರವಾಗಿ ಪರಿಗಣಿಸಿ ಸಾಮೂಹಿಕವಾಗಿ ವ್ಯಾಪಿಸುವುದನ್ನು ತಡೆಯಲು ಕರ್ನಾಟಕ ಗಡಿ ಪ್ರದೇಶಗಳಲ್ಲಿ ಜಾಗೃತಿ, ಕಠಿಣ ನಿಯಂತ್ರಣ ಜಾರಿಗೆ ತರಲು ಕೇರಳ ಕಂದಾಯ ಮತ್ತು ವಸತಿ ನಿರ್ಮಾಣ ಖಾತೆ ಸಚಿವ ಇ.ಚಂದ್ರಶೇಖರನ್ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಸಂಪರ್ಕದ ಮೂಲಕ ರೋಗ ತಗುಲಿದ ಹೆಚ್ಚಿನವರು ಕರ್ನಾಟಕಕ್ಕೆ ಹೋಗಿ ಬಂದವರಾಗಿದ್ದು , ಈ ನಿಟ್ಟಿನಲ್ಲಿ ದೈನಂದಿನ ಗಡಿ ದಾಟುವಿಕೆಯನ್ನು ನಿರ್ಬಂಧಿಸಲಾಗುವುದು. ಗಡಿ ಪ್ರದೇಶಗಳ ಒಳರಸ್ತೆ ಮೂಲಕ ಅಕ್ರಮ ನುಸುಳುವಿಕೆ ತಡೆಯಲು ಹೆಚ್ಚುವರಿ ಬ್ಯಾರಿಕೇಡ್ ಗಳನ್ನು ಸ್ಥಾಪಿಸಲಾಗುವುದು. ಅಲ್ಲದೆ ಪೊಲೀಸರನ್ನೂ ನೇಮಿಸಲಾಗುವುದು‌. ಸರಕು ಸಾಗಾಟ ವಾಹನ ಸಂಚಾರವನ್ನೂ ನಿಯಂತ್ರಿಸಲಾಗುವುದು.
ಉದ್ಯೋಗಕ್ಕಾಗಿ ಕರ್ನಾಟಕಕ್ಕೆ ಹೋಗಬೇಕಾದವರು 28 ದಿನಗಳ ಕಾಲ ಅಲ್ಲಿ ತಂಗಿದ ಬಳಿಕ ಕೇರಳಕ್ಕೆ ಬರಬೇಕು. ಕರ್ನಾಟಕದಿಂದ ಕೇರಳಕ್ಕೆ ಉದ್ಯೋಗಕ್ಕೆ ಬರುವವರಿಗೂ ಇದು ಅನ್ವಯಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಕರ್ನಾಟಕಕ್ಕೆ ದೈನಂದಿನ ಪ್ರಯಾಣದ ಪಾಸ್ ವ್ಯವಸ್ಥೆಯನ್ನೂ ಸ್ಥಗಿತಗೊಳಿಸಲಾಗಿದೆ. ಪಾಸ್ ತೋರಿಸಿದರೂ ಇನ್ನು ಮುಂದೆ ಗಡಿ ದಾಟಿ ಪ್ರಯಾಣಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ಸಚಿವ ಇ.ಚಂದ್ರಶೇಖರನ್ ಹೇಳಿದ್ದಾರೆ.
ಬೇಕಲಕೋಟೆಯನ್ನು ಪ್ರವಾಸಿಗಳಿಗೆ ತೆರೆಯುವ ನಿರ್ಧಾರವನ್ನೂ ಕೈಬಿಡಲಾಗಿದೆ. ಇದೇ ವೇಳೆ ಸಾಮೂಹಿಕವಾಗಿ ವ್ಯಾಪಿಸುವುದನ್ನು ತಡೆಯಲು ಗಡಿ ಪ್ರದೇಶಗಳಲ್ಲಿ ಇನ್ನಷ್ಟು ಕಠಿಣ ನಿಯಂತ್ರಣ ಹೇರಲು ನಿರ್ಧರಿಸಲಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss