ಹೊಸ ದಿಗಂತ ಆನ್ಲೈನ್ ಡೆಸ್ಕ್:
ಸ್ಥಳಿಯಾಡಳಿತ ಚುನಾವಣೆಗೆ ಸಂಬಂಧಿಸಿ ಕೋವಿಡ್ ಪಾಸಿಟಿವ್ ರೋಗಿಗಳು ಹಾಗೂ ನಿಗಾದಲ್ಲಿರುವ ಕೋವಿಡ್ ಶಂಕಿತರಿಗೆ ವಿಶೇಷ ಅಂಚೆ ಮತಪತ್ರ ವಿತರಣೆ ಕಾಸರಗೋಡು ಜಿಲ್ಲೆಯಲ್ಲಿ ಇಂದಿನಿಂದ ಆರಂಭಗೊಂಡಿದೆ.
ವಿಶೇಷ ಪೋಲಿಂಗ್ ಅಧಿಕಾರಿಗಳು ಮತದಾರರನ್ನು ಸಂಪರ್ಕಿಸಿ ಈ ಮತ ಪತ್ರಗಳನ್ನು ನೀಡಲಿದ್ದು, ಈ ವೇಳೆ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಸೂಚಿಸಲಾಗಿದೆ. ಈ ವಿಶೇಷ ಮತದಾರರು ಮತಪತ್ರ ಪಡೆದುಕೊಳ್ಳುವ ಸಂದರ್ಭ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಂಡು ಪಡೆಯಬೇಕಾಗಿದೆ. ಈ ಬಳಿಕ ಸೀಲ್ ಮಾಡಿದ ಮತಪತ್ರವನ್ನು ಅಧಿಕಾರಿಗಳು ನೀಡಲಿದ್ದಾರೆ.
ವಿಶೇಷ ಮತದಾನ ಸೌಲಭ್ಯ ಹೊಂದಿದವರು ಮತದಾನದ ಗೌಪ್ಯತೆ ಪಾಲಿಸಿ ತಾವಿರುವ ಸ್ಥಳದಲ್ಲಿಯೆ ಮತದಾನ ಮಾಡಬಹುದಾಗಿದೆ. ಡಿ.13ರ ತನಕ ಮತದಾನ ಪ್ರಕ್ರಿಯೆ ನಡೆಯಲಿದೆ.