Wednesday, June 29, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್-19 ವ್ಯಾಕ್ಸಿನೇಷನ್ ಎರಡನೇ ಹಂತ ಆರಂಭ

ಹೊಸದಿಗಂತ ವರದಿ,ಕಾಸರಗೋಡು:

ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್-19 ವ್ಯಾಕ್ಸಿನೇಷನ್ ಎರಡನೇ ಹಂತವು ಶುಕ್ರವಾರದಿಂದ ಆರಂಭಗೊಂಡಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.
ಮೊದಲ ಹಂತದಲ್ಲಿ 6328 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ವ್ಯಾಕ್ಸೀನ್ ನೀಡಲಾಗಿದೆ. ಎರಡನೇ ಹಂತದಲ್ಲಿ ಮುಂಗಡ ನೋಂದಣಿ ನಡೆಸಿರುವ ಪೊಲೀಸ್, ಕಂದಾಯ, ಸ್ಥಳೀಯಾಡಳಿತ ಸಿಬ್ಬಂದಿಗಳಾಗಿರುವ 4553 ಮಂದಿಗೆ ವ್ಯಾಕ್ಸೀನ್ ನೀಡಲಾಗುವುದು.
ಫೆ.12 ರಿಂದ 14ರ ತನಕ ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಮೊದಲ ಡೋಸ್ ಕೋವಿಡ್ ವ್ಯಾಕ್ಸೀನ್ ನೀಡಲಾಗುವುದು. ದ್ವಿತೀಯ ಹಂತದ ಮೊದಲ ದಿನ ಕಾಞಂಗಾಡು ಜಿಲ್ಲಾ ಆಸ್ಪತ್ರೆ, ಕಾಸರಗೋಡು ಜನರಲ್ ಆಸ್ಪತ್ರೆ , ನೀಲೇಶ್ವರ ತಾಲೂಕು ಆಸ್ಪತ್ರೆ , ಚೆರುವತ್ತೂರು ಸಮಾಜ ಆರೋಗ್ಯ ಕೇಂದ್ರಗಳಲ್ಲಿ ವ್ಯಾಕ್ಸೀನ್ ವಿತರಣೆಯನ್ನು ಹಮ್ಮಿಕೊಳ್ಳಲಾಗಿದೆ. ಸಂಬಂಧಪಟ್ಟ ಸಿಬ್ಬಂದಿಯ ಮೊಬೈಲ್ ಫೋನ್‌ಗೆ ಎಸ್‌ಎಂಎಸ್ ಲಭಿಸಿದ ತಕ್ಷಣ ಆಯಾ ಕೇಂದ್ರಗಳಿಗೆ ಹಾಜರಾಗಿ ವ್ಯಾಕ್ಸೀನ್ ಪಡೆದುಕೊಳ್ಳುವಂತೆ ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss