Tuesday, August 16, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 155 ಮಂದಿಗೆ ಕೊರೋನಾ ಸೋಂಕು: 40 ಜನರಿಗೆ ಗುಣಮುಖ

ಹೊಸ ದಿಗಂತ ವರದಿ, ಕಾಸರಗೋಡು:

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 155 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ಪೈಕಿ 146 ಜನರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 40 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ 6820 ಜನರಿಗೆ ಕೊರೋನಾ ದೃಢಪಟ್ಟಿದೆ. ಇದರಲ್ಲಿ 5935 ಮಂದಿಗೆ ಸಂಪರ್ಕದ ಮೂಲಕ ರೋಗ ತಗಲಿದೆ. ರಾಜ್ಯದಲ್ಲಿ 7699 ಜನರಿಗೆ ರೋಗಮುಕ್ತಿಯಾಗಿದೆ.
ತೃಶೂರು ಜಿಲ್ಲೆಯಲ್ಲಿ 900, ಕಲ್ಲಿಕೋಟೆ 828, ತಿರುವನಂತಪುರ 756, ಎರ್ನಾಕುಳಂ 749, ಆಲಪ್ಪುಳ 660, ಮಲಪ್ಪುರಂ 627, ಕೊಲ್ಲಂ 523, ಕೋಟ್ಟಾಯಂ 479, ಪಾಲಕ್ಕಾಡು 372, ಕಣ್ಣೂರು 329, ಪತ್ತನಂತ್ತಿಟ್ಟ 212, ಕಾಸರಗೋಡು ಜಿಲ್ಲೆಯಲ್ಲಿ 155, ಇಡುಕ್ಕಿ 116, ವಯನಾಡು ಜಿಲ್ಲೆಯಲ್ಲಿ 114 ಮಂದಿಯಲ್ಲಿ ಕೊರೋನಾ ಪತ್ತೆಯಾಗಿದೆ. ಈ ಮಧ್ಯೆ ಕೋವಿಡ್ ಬಾಧಿಸಿ ಕೇರಳದಲ್ಲಿ ಗುರುವಾರ 26 ಮಂದಿ ಸಾವಿಗೀಡಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss