Monday, August 8, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 108 ಮಂದಿಗೆ ಕೊರೋನಾ ಸೋಂಕು: 36 ಜನರಿಗೆ ಗುಣಮುಖ

ಹೊಸ ದಿಗಂತ ವರದಿ, ಕಾಸರಗೋಡು:

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 108 ಮಂದಿಗೆ ಕೋವಿಡ್ ದೃಢಪಟ್ಟಿದೆ. ಈ ಪೈಕಿ 97 ಜನರಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 36 ಮಂದಿ ಗುಣಮುಖರಾದರು. ಈ ಮಧ್ಯೆ ಕೇರಳದಲ್ಲಿ 5537 ಜನರಿಗೆ ಕೋವಿಡ್ ಸೋಂಕು ತಗಲಿದೆ. ಇದರಲ್ಲಿ 4683 ಮಂದಿಗೆ ಸಂಪರ್ಕದಿಂದ ವೈರಸ್ ಬಾಧಿಸಿದೆ. ರಾಜ್ಯದಲ್ಲಿ 6119 ಜನರಿಗೆ ರೋಗಮುಕ್ತಿಯಾಗಿದೆ.
ತೃಶೂರು 727, ಕಲ್ಲಿಕೋಟೆ 696, ಮಲಪ್ಪುರಂ 617, ಆಲಪ್ಪುಳ 568, ಎರ್ನಾಕುಳಂ 489, ಪಾಲಕ್ಕಾಡು 434, ಕೊಲ್ಲಂ 399, ತಿರುವನಂತಪುರ 386, ಕಣ್ಣೂರು 346, ಕೋಟ್ಟಾಯಂ 344, ಇಡುಕ್ಕಿ 185, ಪತ್ತನಂತ್ತಿಟ್ಟ 138, ಕಾಸರಗೋಡು ಜಿಲ್ಲೆಯಲ್ಲಿ 108, ವಯನಾಡು ಜಿಲ್ಲೆಯಲ್ಲಿ 100 ಜನರಿಗೆ ಕೊರೋನಾ ಸೋಂಕು ತಗಲಿದೆ. ಇದೇ ವೇಳೆ ಕೇರಳದಲ್ಲಿ ಕೋವಿಡ್ ಬಾಧಿಸಿ ಗುರುವಾರ 25 ಮಂದಿ ಮೃತಪಟ್ಟರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss