Wednesday, June 29, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 146 ಮಂದಿ ಗುಣಮುಖ: 145 ಜನರಿಗೆ ಕೊರೋನಾ ಸೋಂಕು

ಹೊಸ ದಿಗಂತ ವರದಿ, ಕಾಸರಗೋಡು:

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 145 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ಪೈಕಿ 134 ಜನರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 146 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ 5722 ಮಂದಿಗೆ ಕೊರೋನಾ ದೃಢಪಟ್ಟಿದೆ. ಇದರಲ್ಲಿ 4904 ಜನರಿಗೆ ಸಂಪರ್ಕದ ಮೂಲಕ ಸೋಂಕು ತಗಲಿದೆ. ರಾಜ್ಯದಲ್ಲಿ 6860 ಮಂದಿಗೆ ರೋಗಮುಕ್ತಿಯಾಗಿದೆ.
ಮಲಪ್ಪುರಂ ಜಿಲ್ಲೆಯಲ್ಲಿ 862, ತೃಶೂರು 631, ಕಲ್ಲಿಕೋಟೆ 575, ಆಲಪ್ಪುಳ 527, ಪಾಲಕ್ಕಾಡು 496, ತಿರುವನಂತಪುರ 456, ಎರ್ನಾಕುಳಂ 423, ಕೋಟ್ಟಾಯಂ 342, ಕೊಲ್ಲಂ 338, ಕಣ್ಣೂರು 337, ಇಡುಕ್ಕಿ 276, ಪತ್ತನಂತ್ತಿಟ್ಟ 200, ಕಾಸರಗೋಡು ಜಿಲ್ಲೆಯಲ್ಲಿ 145, ವಯನಾಡು ಜಿಲ್ಲೆಯಲ್ಲಿ 114 ಜನರಿಗೆ ಕೋವಿಡ್ ದೃಢಪಡಿಸಲಾಗಿದೆ. ಈ ಮಧ್ಯೆ ಕೊರೋನಾ ಬಾಧಿಸಿ ಕೇರಳದಲ್ಲಿ ಗುರುವಾರ 26 ಮಂದಿ ಸಾವಿಗೀಡಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss