Sunday, July 3, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 84 ಜನರಿಗೆ ಕೊರೋನಾ ಸೋಂಕು ದೃಢ

 ಹೊಸ ದಿಗಂತ ವರದಿ, ಕಾಸರಗೋಡು:

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 84 ಮಂದಿಗೆ ಕೋವಿಡ್ ಸೋಂಕು ದೃಢಗೊಂಡಿದೆ. ಈ ಪೈಕಿ 78 ಜನರಿಗೆ ಸಂಪರ್ಕದ ಮೂಲಕ ವೈರಸ್ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 93 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ 5177 ಜನರಿಗೆ ಕೊರೋನಾ ತಗಲಿದೆ. ಇದರಲ್ಲಿ 4542 ಮಂದಿಗೆ ಸಂಪರ್ಕದಿಂದ ಸೋಂಕು ದೃಢಗೊಂಡಿದೆ. ರಾಜ್ಯದಲ್ಲಿ 4801 ಜನರು ಗುಣಮುಖರಾದರು.
ತೃಶೂರು ಜಿಲ್ಲೆಯಲ್ಲಿ 591, ಕೊಲ್ಲಂ 555, ಎರ್ನಾಕುಳಂ 544, ಕಲ್ಲಿಕೋಟೆ 518, ಕೋಟ್ಟಾಯಂ 498, ಮಲಪ್ಪುರಂ 482, ಪತ್ತನಂತ್ತಿಟ್ಟ 405, ತಿರುವನಂತಪುರ 334, ಪಾಲಕ್ಕಾಡು 313, ಆಲಪ್ಪುಳ 272, ಕಣ್ಣೂರು 263, ವಯನಾಡು 165, ಇಡುಕ್ಕಿ 153, ಕಾಸರಗೋಡು ಜಿಲ್ಲೆಯಲ್ಲಿ 84 ಜನರಿಗೆ ಕೋವಿಡ್ ಬಾಧಿಸಿದೆ. ಈ ಮಧ್ಯೆ ಕೊರೋನಾ ಸೋಂಕು ತಗಲಿ ಕೇರಳದಲ್ಲಿ ಗುರುವಾರ 22 ಮಂದಿ ಸಾವಿಗೀಡಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss