Monday, August 8, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 86 ಜನರಿಗೆ ಕೋವಿಡ್ ಸೋಂಕು ದೃಢ

ಹೊಸ ದಿಗಂತ ವರದಿ, ಕಾಸರಗೋಡು:

ಜಿಲ್ಲೆಯಲ್ಲಿ ಗುರುವಾರ 86 ಮಂದಿಗೆ ಕೊರೋನಾ ಪಾಸಿಟಿವ್ ಆಗಿದೆ. ಈ ಪೈಕಿ 84 ಜನರಿಗೆ ಸಂಪರ್ಕದಿಂದ ಸೋಂಕು ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 101 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ 5051 ಜನರಿಗೆ ಕೋವಿಡ್ ದೃಢಪಟ್ಟಿದೆ. ಇದರಲ್ಲಿ 4489 ಮಂದಿಗೆ ಸಂಪರ್ಕದ ಮೂಲಕ ಸೋಂಕು ತಗಲಿದೆ. ರಾಜ್ಯದಲ್ಲಿ 5638 ಜನರು ಗುಣಮುಖರಾದರು.
ಎರ್ನಾಕುಳಂ ಜಿಲ್ಲೆಯಲ್ಲಿ 663, ಕೋಟ್ಟಾಯಂ 515, ಪತ್ತನಂತ್ತಿಟ್ಟ 514, ಕಲ್ಲಿಕೋಟೆ 480, ಮಲಪ್ಪುರಂ 435, ಆಲಪ್ಪುಳ 432, ತೃಶೂರು 432, ಕೊಲ್ಲಂ 293, ತಿರುವನಂತಪುರ 284, ಇಡುಕ್ಕಿ 283, ವಯನಾಡು 244, ಪಾಲಕ್ಕಾಡು 239, ಕಣ್ಣೂರು 151, ಕಾಸರಗೋಡು ಜಿಲ್ಲೆಯಲ್ಲಿ 86 ಜನರಿಗೆ ಕೊರೋನಾ ವೈರಸ್ ಬಾಧಿಸಿದೆ. ಈ ಮಧ್ಯೆ ಕೋವಿಡ್ ತಗಲಿ ಕೇರಳದಲ್ಲಿ ಗುರುವಾರ 25 ಮಂದಿ ಸಾವಿಗೀಡಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss