Thursday, July 7, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 87 ಮಂದಿಗೆ ಕೊರೋನಾ ಸೋಂಕು: 61 ಜನರು ಗುಣಮುಖ

ಹೊಸ ದಿಗಂತ ವರದಿ, ಕಾಸರಗೋಡು: 

ಜಿಲ್ಲೆಯಲ್ಲಿ ಗುರುವಾರ 87 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ಪೈಕಿ 75 ಜನರಿಗೆ ಸಂಪರ್ಕದಿಂದ ಸೋಂಕು ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 61 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ 6334 ಜನರಿಗೆ ಕೊರೋನಾ ವೈರಸ್ ದೃಢಪಟ್ಟಿದೆ. ಇದರಲ್ಲಿ 5658 ಮಂದಿಗೆ ಸಂಪರ್ಕದ ಮೂಲಕ ಸೋಂಕು ತಗಲಿದೆ. ರಾಜ್ಯದಲ್ಲಿ 6229 ಜನರು ಗುಣಮುಖರಾದರು.
ಎರ್ನಾಕುಳಂ ಜಿಲ್ಲೆಯಲ್ಲಿ 771, ಮಲಪ್ಪುರಂ 657, ಕೋಟ್ಟಾಯಂ 647, ಕೊಲ್ಲಂ 628, ಕಲ್ಲಿಕೋಟೆ 579, ಪತ್ತನಂತ್ತಿಟ್ಟ 534, ತಿರುವನಂತಪುರ 468, ತೃಶೂರು 468, ಆಲಪ್ಪುಳ 415, ಇಡುಕ್ಕಿ 302, ಕಣ್ಣೂರು 299, ಪಾಲಕ್ಕಾಡು 241, ವಯನಾಡು 238, ಕಾಸರಗೋಡು ಜಿಲ್ಲೆಯಲ್ಲಿ 87 ಜನರಿಗೆ ಕೊರೋನಾ ವೈರಸ್ ದೃಢಗೊಂಡಿದೆ. ಈ ಮಧ್ಯೆ ಕೋವಿಡ್ ಸೋಂಕು ಬಾಧಿಸಿ ಕೇರಳದಲ್ಲಿ ಗುರುವಾರ 21 ಮಂದಿ ಸಾವಿಗೀಡಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss