Thursday, August 11, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 153 ಮಂದಿಗೆ ಕೊರೋನಾ ಸೋಂಕು: 61 ಜನರಿಗೆ ಗುಣಮುಖ

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 153 ಮಂದಿಗೆ ಕೋವಿಡ್ ಸೋಂಕು ದೃಢಪಡಿಸಲಾಗಿದೆ. ಈ ಪೈಕಿ 139 ಜನರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಅಲ್ಲದೆ 61 ಮಂದಿ ಗುಣಮುಖರಾಗಿದ್ದಾರೆ.
ಕೇರಳದಲ್ಲಿ ಹೊಸದಾಗಿ 1298 ಮಂದಿಯಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಇದರಲ್ಲಿ 1017 ಮಂದಿಗೆ ಸಂಪರ್ಕದಿಂದ ರೋಗ ತಗಲಿದೆ. ರಾಜ್ಯದಲ್ಲಿ ಒಟ್ಟು 800 ಮಂದಿ ರೋಗಮುಕ್ತರಾಗಿದ್ದಾರೆ.
ತಿರುವನಂತಪುರ ಜಿಲ್ಲೆಯಲ್ಲಿ 219, ಕಲ್ಲಿಕೋಟೆ 174, ಕಾಸರಗೋಡು 153, ಪಾಲಕ್ಕಾಡು 136, ಮಲಪ್ಪುರಂ 129, ಆಲಪ್ಪುಳ 99, ತೃಶೂರು 74, ಎರ್ನಾಕುಳಂ 73, ಇಡುಕ್ಕಿ 58, ವಯನಾಡು 46, ಕೋಟ್ಟಾಯಂ 40, ಪತ್ತನಂತ್ತಿಟ್ಟ 33, ಕಣ್ಣೂರು 33 ಹಾಗೂ ಕೊಲ್ಲಂ ಜಿಲ್ಲೆಯಲ್ಲಿ 31 ಜನರಿಗೆ ಗುರುವಾರ ಕೋವಿಡ್ ವೈರಸ್ ಬಾಧಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss