Wednesday, August 10, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 79 ಮಂದಿಗೆ ಕೊರೋನಾ ಸೋಂಕು: 28 ಜನರಿಗೆ ಗುಣಮುಖ

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 79 ಜನರಿಗೆ ಕೋವಿಡ್ ಸೋಂಕು ದೃಢೀಕರಿಸಲಾಗಿದೆ. ಅಲ್ಲದೆ 28 ಜನರು ಗುಣಮುಖರಾದರು. ಕೇರಳದಲ್ಲಿ ಗುರುವಾರ 1564 ಮಂದಿಗೆ ಕೊರೋನಾ ಸೋಂಕು ತಗಲಿದೆ. ಇದರಲ್ಲಿ 1380 ಜನರಿಗೆ ಸಂಪರ್ಕದಿಂದ ಕೋವಿಡ್ ದೃಢಪಟ್ಟಿದೆ. 766 ಮಂದಿ ರೋಗಮುಕ್ತರಾದರು. ಇದೇ ವೇಳೆ ರಾಜ್ಯದಲ್ಲಿ ಗುರುವಾರ 3 ಕೋವಿಡ್ ಸಾವು ಸಂಭವಿಸಿದ್ದು , ತಿರುವನಂತಪುರ, ಕಲ್ಲಿಕೋಟೆ, ಮಲಪ್ಪುರಂ ಜಿಲ್ಲೆಯಲ್ಲಿ ತಲಾ ಒಂದು ಮರಣ ದೃಢಗೊಂಡಿದೆ.
ತಿರುವನಂತಪುರ ಜಿಲ್ಲೆಯಲ್ಲಿ 434, ಮಲಪ್ಪುರಂ 202, ಪಾಲಕ್ಕಾಡು 202, ಎರ್ನಾಕುಳಂ 115, ಕಲ್ಲಿಕೋಟೆ 98, ಕಾಸರಗೋಡು 79, ಪತ್ತನಂತ್ತಿಟ್ಟ 75, ತೃಶೂರು 75, ಕೊಲ್ಲಂ 74, ಆಲಪ್ಪುಳ 72, ಕೋಟ್ಟಾಯಂ 53, ಇಡುಕ್ಕಿ 31, ಕಣ್ಣೂರು 27 ಹಾಗೂ ವಯನಾಡು ಜಿಲ್ಲೆಯಲ್ಲಿ 27 ಜನರಿಗೆ ಗುರುವಾರ ಕೊರೋನಾ ವೈರಸ್ ತಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss