Sunday, June 26, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 154 ಜನರಿಗೆ ಗುಣಮುಖ: 91 ಮಂದಿಗೆ ಕೊರೋನಾ ಪಾಸಿಟಿವ್

ಕಾಸರಗೋಡು: ಜಿಲ್ಲೆಯಲ್ಲಿ ಗುರುವಾರ 91 ಜನರಿಗೆ ಕೊರೋನಾ ಸೋಂಕು ದೃಢಪಡಿಸಲಾಗಿದೆ. ಈ ಪೈಕಿ 79 ಮಂದಿಗೆ ಸಂಪರ್ಕದಿಂದ ಕೋವಿಡ್ ಬಾಧಿಸಿದೆ. ಅಲ್ಲದೆ 154 ಜನರು ರೋಗಮುಕ್ತರಾದರು. ಇದೇ ವೇಳೆ ಕೇರಳದಲ್ಲಿ ಗುರುವಾರ 1968 ಮಂದಿಗೆ ಕೋವಿಡ್ ತಗಲಿದೆ. ಇದರಲ್ಲಿ 1737 ಜನರಿಗೆ ಸಂಪರ್ಕದ ಮೂಲಕ ರೋಗ ದೃಢಗೊಂಡಿದೆ. ರಾಜ್ಯದಲ್ಲಿ 1217 ಮಂದಿ ಗುಣಮುಖರಾದರು. ಇನ್ನೊಂದೆಡೆ ಕೇರಳದಲ್ಲಿ ಗುರುವಾರ ಕೋವಿಡ್ ಬಾಧಿಸಿ ಒಟ್ಟು 9 ಜನರು ಸಾವಿಗೀಡಾದರು.
ತಿರುವನಂತಪುರ ಜಿಲ್ಲೆಯಲ್ಲಿ 429, ಮಲಪ್ಪುರಂ 356, ಆಲಪ್ಪುಳ 198, ಎರ್ನಾಕುಳಂ 150, ಕಲ್ಲಿಕೋಟೆ 130, ಕೋಟ್ಟಾಯಂ 124, ಪತ್ತನಂತ್ತಿಟ್ಟ 119, ಕಾಸರಗೋಡು 91, ಕೊಲ್ಲಂ 86, ಕಣ್ಣೂರು 78, ತೃಶೂರು 72, ಪಾಲಕ್ಕಾಡು 65, ಇಡುಕ್ಕಿ ಮತ್ತು ವಯನಾಡು ಜಿಲ್ಲೆಯಲ್ಲಿ ತಲಾ 35 ಮಂದಿ ಹೊಸದಾಗಿ ಕೊರೋನಾ ವೈರಸ್ ಸೋಂಕಿಗೊಳಗಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss