Friday, July 1, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 140 ಮಂದಿಗೆ ಕೊರೋನಾ ಪಾಸಿಟಿವ್: 127 ಜನರಿಗೆ ಗುಣಮುಖ

ಕಾಸರಗೋಡು: ಜಿಲ್ಲೆಯಲ್ಲಿ ಗುರುವಾರ 140 ಜನರಿಗೆ ಕೊರೋನಾ ಪಾಸಿಟಿವ್ ಆಗಿದೆ. ಈ ಪೈಕಿ 137 ಮಂದಿಗೆ ಸಂಪರ್ಕದ ಮೂಲಕ ಕೋವಿಡ್ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 127 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ ಗುರುವಾರ 3349 ಮಂದಿಗೆ ಕೊರೋನಾ ಸೋಂಕು ತಗಲಿದೆ. ಇದರಲ್ಲಿ 3058 ಜನರಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. 1657 ಜನರಿಗೆ ಕೋವಿಡ್ ಮುಕ್ತಿಯಾಗಿದೆ.
ತಿರುವನಂತಪುರ ಜಿಲ್ಲೆಯಲ್ಲಿ 558, ಮಲಪ್ಪುರಂ 330, ತೃಶೂರು 300, ಕಣ್ಣೂರು 276, ಆಲಪ್ಪುಳ 267, ಕಲ್ಲಿಕೋಟೆ 261, ಕೊಲ್ಲಂ 244, ಎರ್ನಾಕುಳಂ 227, ಕೋಟ್ಟಾಯಂ 217, ಪಾಲಕ್ಕಾಡು 194, ಕಾಸರಗೋಡು ಜಿಲ್ಲೆಯಲ್ಲಿ 140, ಪತ್ತನಂತ್ತಿಟ್ಟ 135, ಇಡುಕ್ಕಿ 105, ವಯನಾಡು ಜಿಲ್ಲೆಯಲ್ಲಿ 95 ಜನರಿಗೆ ಕೋವಿಡ್ ದೃಢೀಕರಿಸಲಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಗುರುವಾರ 12 ಮಂದಿ ಕೊರೋನಾ ಬಾಧಿಸಿ ಮೃತಪಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss