Wednesday, August 10, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 319 ಮಂದಿಗೆ ಕೋವಿಡ್ ಸೋಂಕು: 130 ಜನರಿಗೆ ಗುಣಮುಖ

ಕಾಸರಗೋಡು: ಜಿಲ್ಲೆಯಲ್ಲಿ ಗುರುವಾರ 319 ಮಂದಿಗೆ ಕೊರೋನಾ ಪಾಸಿಟಿವ್ ಆಗಿದೆ. ಈ ಪೈಕಿ 289 ಜನರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 130 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ 4531 ಜನರಿಗೆ ಕೊರೋನಾ ಸೋಂಕು ದೃಢಪಡಿಸಲಾಗಿದೆ. ಇದರಲ್ಲಿ 3730 ಮಂದಿಗೆ ಸಂಪರ್ಕದಿಂದ ಕೋವಿಡ್ ತಗಲಿದೆ. ರಾಜ್ಯದಲ್ಲಿ 2737 ಜನರಿಗೆ ರೋಗಮುಕ್ತಿಯಾಗಿದೆ.
ತಿರುವನಂತಪುರ ಜಿಲ್ಲೆಯಲ್ಲಿ 820, ಕಲ್ಲಿಕೋಟೆ 545, ಎರ್ನಾಕುಳಂ 383, ಆಲಪ್ಪುಳ 367, ಮಲಪ್ಪುರಂ 351, ಕಾಸರಗೋಡು ಜಿಲ್ಲೆಯಲ್ಲಿ 319, ತೃಶೂರು 296, ಕಣ್ಣೂರು 260, ಪಾಲಕ್ಕಾಡು 241, ಕೊಲ್ಲಂ 218, ಕೋಟ್ಟಾಯಂ 204, ಪತ್ತನಂತ್ತಿಟ್ಟ 136, ವಯನಾಡು 107, ಇಡುಕ್ಕಿ ಜಿಲ್ಲೆಯಲ್ಲಿ 104 ಮಂದಿಗೆ ಗುರುವಾರ ಕೊರೋನಾ ಸೋಂಕು ಬಾಧಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss