Sunday, August 14, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 300 ಮಂದಿಗೆ ಕೊರೋನಾ ಸೋಂಕು: 158 ಜನರಿಗೆ ಗುಣಮುಖ

ಕಾಸರಗೋಡು: ಜಿಲ್ಲೆಯಲ್ಲಿ ಗುರುವಾರ 300 ಮಂದಿಗೆ ಕೊರೋನಾ ಸೋಂಕು ದೃಢಪಡಿಸಲಾಗಿದೆ. ಈ ಪೈಕಿ 270 ಜನರಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 158 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ 6324 ಜನರಿಗೆ ಕೋವಿಡ್ ತಗಲಿದೆ. ಇದರಲ್ಲಿ 5321 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ರಾಜ್ಯದಲ್ಲಿ 3168 ಮಂದಿಗೆ ರೋಗಮುಕ್ತಿಯಾಗಿದೆ.
ಕಲ್ಲಿಕೋಟೆ ಜಿಲ್ಲೆಯಲ್ಲಿ 883, ತಿರುವನಂತಪುರ 875, ಮಲಪ್ಪುರಂ 763, ಎರ್ನಾಕುಳಂ 590, ತೃಶೂರು 474, ಆಲಪ್ಪುಳ 453, ಕೊಲ್ಲಂ 440, ಕಣ್ಣೂರು 406, ಪಾಲಕ್ಕಾಡು 353, ಕೋಟ್ಟಾಯಂ 341, ಕಾಸರಗೋಡು ಜಿಲ್ಲೆಯಲ್ಲಿ 300, ಪತ್ತನಂತ್ತಿಟ್ಟ 189, ಇಡುಕ್ಕಿ 151, ವಯನಾಡು 106 ಮಂದಿಗೆ ಹೊಸದಾಗಿ ಕೊರೋನಾ ದೃಢಗೊಂಡಿದೆ. ಈ ಮಧ್ಯೆ ಕೇರಳದಲ್ಲಿ ಕೋವಿಡ್ ಬಾಧಿಸಿ ಗುರುವಾರ 21 ಜನರು ಮೃತಪಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss