ಕಾಸರಗೋಡು: ಜಿಲ್ಲೆಯಲ್ಲಿ ಗುರುವಾರ 471 ಮಂದಿಗೆ ಕೊರೋನಾ ಸೋಂಕು ದೃಢಗೊಂಡಿದೆ. ಈ ಪೈಕಿ 447 ಜನರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 289 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ 8135 ಮಂದಿಗೆ ಕೋವಿಡ್ ದೃಢಪಡಿಸಲಾಗಿದೆ. ಇದರಲ್ಲಿ 7013 ಜನರಿಗೆ ಸಂಪರ್ಕದ ಮೂಲಕ ರೋಗ ತಗಲಿದೆ. ರಾಜ್ಯದಲ್ಲಿ 2828 ಮಂದಿಗೆ ರೋಗಮುಕ್ತಿಯಾಗಿದೆ.
ಕಲ್ಲಿಕೋಟೆ ಜಿಲ್ಲೆಯಲ್ಲಿ 1072, ಮಲಪ್ಪುರಂ 968, ಎರ್ನಾಕುಳಂ 934, ತಿರುವನಂತಪುರ 856, ಆಲಪ್ಪುಳ 804, ಕೊಲ್ಲಂ 633, ತೃಶೂರು 613, ಪಾಲಕ್ಕಾಡು 513, ಕಾಸರಗೋಡು ಜಿಲ್ಲೆಯಲ್ಲಿ 471, ಕಣ್ಣೂರು 435, ಕೋಟ್ಟಾಯಂ 340, ಪತ್ತನಂತ್ತಿಟ್ಟ 223, ವಯನಾಡು 143, ಇಡುಕ್ಕಿ ಜಿಲ್ಲೆಯಲ್ಲಿ 130 ಜನರಿಗೆ ಕೋವಿಡ್ ವೈರಸ್ ಸೋಂಕು ದೃಢಗೊಂಡಿದೆ. ಈ ಮಧ್ಯೆ ಕಾಸರಗೋಡು ಜಿಲ್ಲೆಯ ಮೂರು ಮಂದಿ ಸೇರಿದಂತೆ ಕೇರಳದಲ್ಲಿ 29 ಮಂದಿ ಕೊರೋನಾ ಬಾಧಿಸಿ ಗುರುವಾರ ಸಾವಿಗೀಡಾದರು