ಕಾಸರಗೋಡು: ಜಿಲ್ಲೆಯಲ್ಲಿ ಜನಪರ ಒಕ್ಕೂಟ ಆಯುರ್ ರಕ್ಷಾ ಟಾಸ್ಕ್ ಪೋರ್ಸ್ ಚಟುವಟಿಕೆಗಳು ಆರಂಭಗೊಂಡಿವೆ.
ಕೋವಿಡ್ – 19 ಪ್ರತಿರೋಧ ಚಟುವಟಿಕೆಗಳ ಜೊತೆಯಲ್ಲೇ ಅಂಟುರೋಗಗಳ ಪ್ರತಿರೋಧವನ್ನೂ ನಡೆಸುವ ನಿಟ್ಟಿನಲ್ಲಿ ಜಿಲ್ಲೆಯ ಆಯುರ್ ರಕ್ಷಾ ಕ್ಲೀನಿಕ್ ಗಳ ಚಟುವಟಿಕೆಗಳನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯ ಆರಂಭಿಸಲಾಗಿದೆ.
ಸ್ಥಳೀಯಾಡಳಿತ ಸಂಸ್ಥೆಗಳನ್ನು ಮತ್ತು ಸರಕಾರಿ ಆಯುರ್ವೇದ ಆಸ್ಪತ್ರೆಗಳನ್ನು ಕೇಂದ್ರೀಕರಿಸಿ ಟಾಸ್ಕ್ ಪೋರ್ಸ್ ಗಳು ಕಾರ್ಯಾಚರಿಸಲಿವೆ. ಆರೋಗ್ಯಯುತ ಜೀವನಶೈಲಿಯ ಮೂಲಕ ಮತ್ತು ಅನಿವಾರ್ಯ ಪ್ರತಿರೋಧ ಔಷಧಗಳ ಸೇವನೆ ಮೂಲಕ ರೋಗ ಪ್ರತಿರೋಧ ಶಕ್ತಿ ಸುಧಾರಿತಗೊಳಿಸುವ ಉದ್ದೇಶದಿಂದ ಟಾಸ್ಕ್ ಪೋರ್ಸ್ ಗಳು ಜನರ ಬಳಿಗೆ ಆಗಮಿಸುತ್ತಿವೆ.
ಆಯುರ್ ರಕ್ಷಾ ಟಾಸ್ಕ್ ಪೋರ್ಸ್ ಜಿಲ್ಲಾ ಆಯುರ್ವೇದ ಕೋವಿಡ್ ರೆನ್ಸ್ ಪಾನ್ಸ್ ಸೆಲ್ ನ ಉಪವಿಭಾಗವಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ.