ಕಾಸರಗೋಡು: ಕಾಸರಗೋಡು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಡೆಂಗ್ಯೂ ಜ್ವರ ಹರಡುತ್ತಿರುವ ಈ ವೇಳೆಯಲ್ಲಿ ಹೋಮಿಯೋಪತಿ ಇಲಾಖೆಯು ಚಿಕಿತ್ಸಾ ಸೌಲಭ್ಯ ಸಿದ್ಧಪಡಿಸಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ (ಹೋಮಿಯೋ) ತಿಳಿಸಿದ್ದಾರೆ. ಜಿಲ್ಲೆಯ ಹೋಮಿಯೋ ಸರಕಾರಿ ಆಸ್ಪತ್ರೆಗಳಲ್ಲಿ , ಡಿಸ್ಪೆನ್ಸರಿಗಳಲ್ಲಿ , ಆಯುಷ್ ಹೋಮಿಯೋ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಡೆಂಗ್ಯೂ ಜ್ವರದ ಔಷಧಗಳಿವೆ ಎಂದು ಅವರು ಹೇಳಿದರು.
ಜ್ವರ, ತಲೆನೋವು, ಶರೀರ ನೋವು ಸಹಿತ ಇನ್ನಿತರ ಲಕ್ಷಣಗಳು ಕಂಡುಬಂದಲ್ಲಿ ಸಮೀಪದ ಸರಕಾರಿ ಹೋಮಿಯೋ ಸಂಸ್ಥೆಗಳಲ್ಲಿ ಚಿಕಿತ್ಸೆ ಪಡೆಯುವಂತೆ ಅವರು ಸಲಹೆ ನೀಡಿದ್ದಾರೆ. ಡೆಂಗ್ಯೂ ಜ್ವರದ ಬಗ್ಗೆ ನಿರ್ಲಕ್ಷ ವಹಿಸಬಾರದು. ಸರಿಯಾದ ಚಿಕಿತ್ಸೆ ಪಡೆದಲ್ಲಿ ಈ ಜ್ವರ ಸಂಪೂರ್ಣ ವಾಸಿಯಾಗುವುದು ಎಂದು ಹೋಮಿಯೋ ವೈದ್ಯಾಧಿಕಾರಿ ತಿಳಿಸಿದ್ದಾರೆ.