Wednesday, July 6, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 103 ಮಂದಿಗೆ ಕೊರೋನಾ ಸೋಂಕು: 61 ಜನರು ಗುಣಮುಖ

ಹೊಸ ದಿಗಂತ ವರದಿ, ಕಾಸರಗೋಡು:

ಜಿಲ್ಲೆಯಲ್ಲಿ ಬುಧವಾರ 103 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ಪೈಕಿ 95 ಜನರಿಗೆ ಸಂಪರ್ಕದಿಂದ ಸೋಂಕು ತಗಲಿದೆ. ಅಲ್ಲದೆ ಜಿಲ್ಲೆಯಲ್ಲಿ 61 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ 6491 ಜನರಿಗೆ ಕೊರೋನಾ ದೃಢಪಟ್ಟಿದೆ. ಇದರಲ್ಲಿ 5669 ಮಂದಿಗೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ. ರಾಜ್ಯದಲ್ಲಿ 5770 ಜನರು ಗುಣಮುಖರಾದರು.
ಕಲ್ಲಿಕೋಟೆ ಜಿಲ್ಲೆಯಲ್ಲಿ 833, ಎರ್ನಾಕುಳಂ 774, ಮಲಪ್ಪುರಂ 664, ತೃಶೂರು 652, ಆಲಪ್ಪುಳ 546, ಕೊಲ್ಲಂ 539, ಪಾಲಕ್ಕಾಡು 463, ತಿರುವನಂತಪುರ 461, ಕೋಟ್ಟಾಯಂ 450, ಪತ್ತನಂತ್ತಿಟ್ಟ 287, ಕಣ್ಣೂರು 242, ವಯನಾಡು 239, ಇಡುಕ್ಕಿ 238, ಕಾಸರಗೋಡು ಜಿಲ್ಲೆಯಲ್ಲಿ 103 ಮಂದಿಗೆ ಕೋವಿಡ್ ತಗಲಿದೆ. ಈ ಮಧ್ಯೆ ಕೊರೋನಾ ಬಾಧಿಸಿ ಬುಧವಾರ ಕೇರಳದಲ್ಲಿ 26 ಮಂದಿ ಸಾವಿಗೀಡಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss