ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರ 49 ಮಂದಿಗೆ ಕೊರೋನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಈ ಪೈಕಿ 32 ಮಂದಿಗೆ ಸಂಪರ್ಕದಿಂದ ವೈರಸ್ ಬಾಧಿಸಿದೆ. 36 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಮನೆಗೆ ಮರಳಿದ್ದಾರೆ.
ಇದೇ ವೇಳೆ ಕೇರಳದಲ್ಲಿ ಹೊಸದಾಗಿ 903 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇದರಲ್ಲಿ 706 ಮಂದಿಗೆ ಸಂಪರ್ಕದಿಂದ ರೋಗ ತಗಲಿದೆ. 641 ಮಂದಿ ರೋಗಮುಕ್ತರಾಗಿದ್ದಾರೆ. ಮಲಪ್ಪುರಂ ಜಿಲ್ಲೆಯಲ್ಲಿ ಒಂದು ಕೋವಿಡ್ ಸಾವು ಸಂಭವಿಸಿದೆ.
ತಿರುವನಂತಪುರ ಜಿಲ್ಲೆಯಲ್ಲಿ 213, ಮಲಪ್ಪುರಂ 87, ಕೊಲ್ಲಂ 84, ಎರ್ನಾಕುಳಂ 83, ಕಲ್ಲಿಕೋಟೆ 57, ಪತ್ತನಂತ್ತಿಟ್ಟ 54, ಕಾಸರಗೋಡು 49, ವಯನಾಡು 43, ಕಣ್ಣೂರು 42, ಆಲಪ್ಪುಳ 38, ಇಡುಕ್ಕಿ 34, ತೃಶೂರು 31 ಹಾಗೂ ಕೋಟ್ಟಾಯಂ
ಜಿಲ್ಲೆಯಲ್ಲಿ 29 ಜನರಿಗೆ ಬುಧವಾರ ಕೊರೋನಾ ಸೋಂಕು ತಗಲಿದೆ.