Tuesday, August 16, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 128 ಮಂದಿಗೆ ಕೊರೋನಾ ಸೋಂಕು: 105 ಜನರಿಗೆ ರೋಗಮುಕ್ತಿ

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ ಹೊಸದಾಗಿ 128 ಜನರಿಗೆ ಕೋವಿಡ್ ಸೋಂಕು ಬಾಧಿಸಿದೆ. ಅಲ್ಲದೆ 105 ಮಂದಿ ರೋಗಮುಕ್ತರಾಗಿದ್ದಾರೆ. ಇದೇ ವೇಳೆ ಕೇರಳದಲ್ಲಿ ಬುಧವಾರ 1105 ಮಂದಿಯಲ್ಲಿ ಕೊರೋನಾ ವೈರಸ್ ದೃಢೀಕರಿಸಲಾಗಿದೆ. ಈ ಪೈಕಿ 971 ಜನರಿಗೆ ಸಂಪರ್ಕದಿಂದ ಕೊರೋನಾ ತಗಲಿದೆ. ರಾಜ್ಯದಲ್ಲಿ ಒಟ್ಟು 1234 ಮಂದಿ ಗುಣಮುಖರಾಗಿದ್ದಾರೆ. ಈ ಮಧ್ಯೆ ಕೇರಳದಲ್ಲಿ ಬುಧವಾರ ಮಹಾಮಾರಿ ಕೋವಿಡ್ ಬಾಧಿಸಿ ಕಾಸರಗೋಡು ಜಿಲ್ಲೆಯ ಒಬ್ಬರು ಸೇರಿದಂತೆ ಒಟ್ಟು 7 ಮಂದಿ ಸಾವಿಗೀಡಾಗಿದ್ದಾರೆ.
ತಿರುವನಂತಪುರ ಜಿಲ್ಲೆಯಲ್ಲಿ 274, ಮಲಪ್ಪುರಂ 167, ಕಾಸರಗೋಡು 128, ಎರ್ನಾಕುಳಂ 120, ಆಲಪ್ಪುಳ 108, ತೃಶೂರು 86, ಕಣ್ಣೂರು 61, ಕೋಟ್ಟಾಯಂ 51, ಪಾಲಕ್ಕಾಡು 41, ಕಲ್ಲಿಕೋಟೆ 39, ಇಡುಕ್ಕಿ 39, ಪತ್ತನಂತ್ತಿಟ್ಟ 37, ಕೊಲ್ಲಂ 30 ಹಾಗೂ ವಯನಾಡು ಜಿಲ್ಲೆಯಲ್ಲಿ ಹೊಸದಾಗಿ 14 ಜನರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss