Sunday, August 14, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 101 ಮಂದಿಗೆ ಕೊರೋನಾ ಸೋಂಕು: 40 ಜನರಿಗೆ ಗುಣಮುಖ

ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರ 101 ಜನರಿಗೆ ಕೊರೋನಾ ವೈರಸ್ ಸೋಂಕು ದೃಢಪಡಿಸಲಾಗಿದೆ. ಈ ಪೈಕಿ 79 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಅಲ್ಲದೆ 40 ಜನರು ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ 2476 ಮಂದಿಗೆ ಬುಧವಾರ ಕೋವಿಡ್ ತಗಲಿದೆ. ಇದರಲ್ಲಿ 2243 ಜನರಿಗೆ ಸಂಪರ್ಕದಿಂದ ಕೊರೋನಾ ಬಾಧಿಸಿದೆ. ಈ ಮಧ್ಯೆ ರಾಜ್ಯದಲ್ಲಿ 2351 ಮಂದಿ ರೋಗಮುಕ್ತರಾದರು. ಕೇರಳದಲ್ಲಿ ಬುಧವಾರ ಒಟ್ಟು 13 ಜನರು ಕೋವಿಡ್ ತಗಲಿ ಸಾವಿಗೀಡಾದರು.
ತಿರುವನಂತಪುರ ಜಿಲ್ಲೆಯಲ್ಲಿ 461, ಮಲಪ್ಪುರಂ 352, ಕಲ್ಲಿಕೋಟೆ 215, ತೃಶೂರು 204, ಆಲಪ್ಪುಳ 193, ಎರ್ನಾಕುಳಂ 193, ಪತ್ತನಂತ್ತಿಟ್ಟ 180, ಕೋಟ್ಟಾಯಂ 137, ಕೊಲ್ಲಂ 133, ಕಣ್ಣೂರು 128, ಕಾಸರಗೋಡು ಜಿಲ್ಲೆಯಲ್ಲಿ 101, ಪಾಲಕ್ಕಾಡು 86, ಇಡುಕ್ಕಿ 63 ಹಾಗೂ ವಯನಾಡು ಜಿಲ್ಲೆಯಲ್ಲಿ 30 ಮಂದಿಗೆ ಕೊರೋನಾ ಪಾಸಿಟಿವ್ ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss