Wednesday, August 10, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 208 ಮಂದಿಗೆ ಕೊರೋನಾ ದೃಢ: 173 ಜನರಿಗೆ ರೋಗಮುಕ್ತಿ

ಕಾಸರಗೋಡು: ಜಿಲ್ಲೆಯಲ್ಲಿ ಭಾನುವಾರ 208 ಮಂದಿಗೆ ಕೊರೋನಾ ಸೋಂಕು ದೃಢಗೊಂಡಿದೆ. ಈ ಪೈಕಿ 203 ಜನರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 173 ಮಂದಿ ರೋಗಮುಕ್ತರಾದರು. ಇದೇ ವೇಳೆ ಕೇರಳದಲ್ಲಿ 4696 ಜನರಿಗೆ ಕೋವಿಡ್ ತಗಲಿದೆ. ಇದರಲ್ಲಿ 4425 ಮಂದಿಗೆ ಸಂಪರ್ಕದ ಮೂಲಕ ರೋಗ ದೃಢಗೊಂಡಿದೆ. ರಾಜ್ಯದಲ್ಲಿ 2751 ಮಂದಿ ಗುಣಮುಖರಾದರು.
ತಿರುವನಂತಪುರ ಜಿಲ್ಲೆಯಲ್ಲಿ 892, ಎರ್ನಾಕುಳಂ 537, ಕಲ್ಲಿಕೋಟೆ 536, ಮಲಪ್ಪುರಂ 483, ಕೊಲ್ಲಂ 330, ತೃಶೂರು 322, ಪಾಲಕ್ಕಾಡು 289, ಕೋಟ್ಟಾಯಂ 274, ಕಣ್ಣೂರು 242, ಆಲಪ್ಪುಳ 219, ಕಾಸರಗೋಡು ಜಿಲ್ಲೆಯಲ್ಲಿ 208, ಪತ್ತನಂತ್ತಿಟ್ಟ 190, ವಯನಾಡು 97, ಇಡುಕ್ಕಿ ಜಿಲ್ಲೆಯಲ್ಲಿ 77 ಜನರಿಗೆ ಕೋವಿಡ್ ಬಾಧಿಸಿದೆ. ಈ ಮಧ್ಯೆ ಕೇರಳದಲ್ಲಿ ಕೊರೋನಾ ತಗಲಿ 16 ಮಂದಿ ಸಾವಿಗೀಡಾದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss