Thursday, August 11, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 252 ಮಂದಿಗೆ ಕೊರೋನಾ ಸೋಂಕು: 210 ಜನರಿಗೆ ಗುಣಮುಖ

ಕಾಸರಗೋಡು: ಜಿಲ್ಲೆಯಲ್ಲಿ ಭಾನುವಾರ 252 ಮಂದಿಗೆ ಕೊರೋನಾ ದೃಢಗೊಂಡಿದೆ. ಈ ಪೈಕಿ 247 ಜನರಿಗೆ ಸಂಪರ್ಕದ ಮೂಲಕ ಕೋವಿಡ್ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 210 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ ಭಾನುವಾರ 7445 ಜನರಿಗೆ ಕೊರೋನಾ ತಗಲಿದೆ. ಇದರಲ್ಲಿ 6965 ಮಂದಿಗೆ ಸಂಪರ್ಕದಿಂದ ಸೋಂಕು ಬಾಧಿಸಿದೆ. ರಾಜ್ಯದಲ್ಲಿ 3391 ಜನರಿಗೆ ರೋಗಮುಕ್ತಿಯಾಗಿದೆ.
ಕಲ್ಲಿಕೋಟೆ ಜಿಲ್ಲೆಯಲ್ಲಿ 956, ಎರ್ನಾಕುಳಂ 924, ಮಲಪ್ಪುರಂ 915, ತಿರುವನಂತಪುರ 853, ಕೊಲ್ಲಂ 690, ತೃಶೂರು 573, ಪಾಲಕ್ಕಾಡು 488, ಆಲಪ್ಪುಳ 476, ಕೋಟ್ಟಾಯಂ 426, ಕಣ್ಣೂರು 332, ಪತ್ತನಂತ್ತಿಟ್ಟ 263, ಕಾಸರಗೋಡು ಜಿಲ್ಲೆಯಲ್ಲಿ 252, ವಯನಾಡು 172, ಇಡುಕ್ಕಿ ಜಿಲ್ಲೆಯಲ್ಲಿ 125 ಮಂದಿಗೆ ಕೊರೋನಾ ತಗಲಿದೆ. ಈ ಮಧ್ಯೆ ಕಾಸರಗೋಡು ಜಿಲ್ಲೆಯ ಒಬ್ಬರು ಸೇರಿದಂತೆ ಕೇರಳದಲ್ಲಿ ಭಾನುವಾರ 21 ಮಂದಿ ಕೊರೋನಾ ಬಾಧಿಸಿ ಮೃತಪಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss